(ನ್ಯೂಸ್ ಕಡಬ) newskadaba.com ಡಿ.31: ಕಾರವಾರ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ಸೇತುವೆ ಮೇಲೆ ನಡೆದಿದೆ. ಮೃತರನ್ನು ಕಾರವಾರ ತಾಲ್ಲೂಕಿನ ಮಾವಿನಕುರ್ವದ ರಾಘವೇಂದ್ರ ಸೋಮಯ್ಯ ಗೌಡ (34), ಸಂಶಿಯ ಗೌರೀಶ ( 25), ಖರ್ವಾದ ರಮೇಶ (22) ಎಂದು ಗುರುತಿಸಲಾಗಿದೆ.
ವಿಜಯಪುರದಿಂದ ಮಂಗಳೂರಿಗೆ ಸಾಗುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್‌ನಲ್ಲಿದ್ದವರು ಮಂಕಿ ಕಡೆಯಿಂದ ಹೊನ್ನಾವರ ಪಟ್ಟಣಕ್ಕೆ ಹೊರಟಿದ್ದರು ಎನ್ನಲಾಗಿದ್ದು, ಬೈಕ್ ಮತ್ತು ಬಸ್ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಮೂವರು ಸವಾರರೂ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.