ಸವಣೂರು: ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಜಾತ್ರೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಮಾ.27. ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ 4ನೇ ವಾರ್ಷಿಕ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.

ಮಾ.25 ರಂದು ಬೆಳಿಗ್ಗೆ ಭಕ್ತಾಧಿಗಳಿಂದ ಹೊರೆಕಾಣಿಕೆ ಸಮರ್ಪಣೆ ಬಳಿಕ ಭಕ್ತಾಧಿಗಳಿಂದ ಕ್ಷೇತ್ರ ಸ್ವಚ್ಚತೆ, ಅಲಂಕಾರ ಸೇವೆ, ಸಂಜೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ ,ಪುಣ್ಯಾಹ, ಪ್ರಸಾದ ಶುದ್ದಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ರಾತ್ರಿ ಪೂಜೆ ನಡೆಯಿತು.

ಮಾ.26 ರಂದು ಪ್ರಾತಃಕಾಲ ನಿತ್ಯಪೂಜೆ, ಮಹಾಗಣಪತಿ ಹೋಮ, ಬಿಂಬ ಶುದ್ದಿ, ಕಲಶಪೂಜೆ, ಮದ್ಯಾಹ್ನ ಕಲಶಾಭಿಷೇಕ, ದೇವರುಗಳ ವಾರ್ಷಿಕ ಪ್ರತಿಷ್ಠಾ ದಿನದ ಪೂಜೆ, ಕಲಶಾಭಿಷೇಕ, ದೈವಗಳಿಗೆ ತಂಬಿಲ, ನೂತನ ವಸಂತಕಟ್ಟೆಯ ಸಮರ್ಪಣೆ, ಮಹಾಪೂಜೆ, ಪ್ರಸಾದ ವಿತರಣೆ, ಪಲ್ಲ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ 6 ರಿಂದ ದೀಪಾರಾಧನೆ, ತಾಯುಬಕಂ, ಮಹಾಪೂಜೆ.ಶ್ರೀ ದೇವರ ಬಲಿ ಹೊರಟು ಉತ್ಸವ, ಭೂತ ಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ವೈಧಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ ನಂತರ ಓಂಕಾರ ಸೇವಾ ಸಮಿತಿಯ ಆರೇಲ್ತಡಿ ಇದರ ಸೇವಾ ರೂಪವಾಗಿ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಪ್ರದರ್ಶನ ಬಾಗ್ಯದ ಬಂಗಾರಿ ಯಕ್ಷಗಾನ ಪ್ರದರ್ಶನ ನಡೆಯಿತು.

Also Read  ಸವಣೂರು: ಮೊಗರು ಬಿಜೆಪಿ ಬೂತ್ ಸಮಿತಿ ಸಭೆ

ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ, ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ, ಪವಿತ್ರಪಾಣಿ ರತ್ನಾಕರ ಕುಂಜತ್ತಾಯ, ವ್ಯವಸ್ಥಾಪನ ಸಮಿತಿ ಸದಸ್ಯರಾದ ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ರಾಕೇಶ ರೈ ಕೆಡೆಂಜಿ, ಶಿವರಾಮ ಗೌಡ ಮೆದು, ಅರ್ಚಕ ಪದ್ಮನಾಭ ಕುಂಜತ್ತಾಯ, ಆಶಾ ಪ್ರವೀಣ್ ನಾೈಕ್ ಕಂಪ, ಮೋನಪ್ಪ ಗೌಡ ಆರೆಲ್ತಡಿ, ಪ್ರೇಮಾ ಪುಟ್ಟಣ್ಣ ನಾಯ್ಕ ಕೆಡೆಂಜಿ ಹಾಗೂ ಓಂಕಾರ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Also Read  ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಕುದ್ಮಾರಿನಲ್ಲಿ ಹೆಣದೂರು ಬೀದಿ ನಾಟಕ

error: Content is protected !!
Scroll to Top