ಸೇನಾ ವಾಹನ ಕಮರಿಗೆ ಬಿದ್ದು ಗಂಭೀರ ಗಾಯ; ಚಿಕಿತ್ಸೆ ಫಲಿಸದೆ ಕೊಡಗಿನ ಯೋಧ ಹುತಾತ್ಮ!

(ನ್ಯೂಸ್ ಕಡಬ) newskadaba.com ಡಿ.30: ಜಮ್ಮು ಕಾಶ್ಮೀರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದು ಗಾಯಗೊಂಡಿದ್ದ ಕೊಡಗು ಮೂಲದ ಯೋಧ ದಿವಿನ್ (28) ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ. ಕಳೆದ ವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ವಾಹನ ಕಮರಿಗೆ ಬಿದ್ದು ನಾಲ್ವರು ಯೋಧರು ಹುತಾತ್ಮರಾಗಿದ್ದರು.

ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಿವಿನ್ ಅವರನ್ನು ಶ್ರೀನಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೇನಾಧಿಕಾರಿಗಳ ತುರ್ತು ಕರೆ ಹಿನ್ನೆಲೆ ಯೋಧನ ತಾಯಿ ಜಯ ಅವರು ಶ್ರೀನಗರಕ್ಕೆ ತೆರಳಿದ್ದರು. ಇದೀಗ ಅವರು ಹುತಾತ್ಮರಾಗಿರುವ ಸುದ್ದಿ ವರದಿಯಾಗಿದೆ.

Also Read  ರಾಷ್ಟ್ರಪತಿ ಭವನಕ್ಕೆ ವ್ಯಾಪಿಸಿದ ಕೊರೋನ: 500 ಮಂದಿಗೆ ಕ್ವಾರಂಟೈನ್

Nk Cake House

ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ದಾಪುರ ಗ್ರಾಮದ ಯೋಧ ದಿವಿನ್, ತಂದೆ ತಾಯಿಗೆ ಏಕೈಕ ಮಗನಾಗಿದ್ದು, 10 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಶ್ವಾಸಕೋಶಕ್ಕೆ ತೀವ್ರ ಹಾನಿ ಆದ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

error: Content is protected !!
Scroll to Top