ಕುದ್ಮಾರು: ತಿರಂಗಾ ವಾರಿಯರ್ಸ್ ವತಿಯಿಂದ ಸ್ಚಚ್ಛತಾ ಕಾರ್ಯ

(ನ್ಯೂಸ್ ಕಡಬ) newskadaba.com ಬೆಳಂದೂರು, ಮಾ.27. ದ.ಕ. ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಬೆಳಂದೂರು, ತಿರಂಗಾ ವಾರಿಯರ್ಸ್ ಕುದ್ಮಾರು ಇವುಗಳ ಸಹಯೋಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕುದ್ಮಾರು ಗ್ರಾಮದಲ್ಲಿ ಸ್ಚಚ್ಛತಾ ಕಾರ್ಯ ನಡೆಯಿತು.

ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಮೇಶ್ವರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನಮ್ಮ ಮನೆ, ಪರಿಸರ, ಗ್ರಾಮವನ್ನು ಸ್ಚಚ್ಛವಾಗಿಟ್ಟುಕೊಳ್ಳುವ ಕಾರ್ಯವಾಗಬೇಕು. ಎಲ್ಲೆಂದರಲ್ಲಿ ಕಸ ಬಿಸಾಡುವ ರೂಢಿಗೆ ಸ್ವಪ್ರೇರಣೆಯಿಂದ ಕಡಿವಾಣ ಹಾಕುವಂತಾಗಬೇಕೆಂದರು.

ಪಿಡಿಒ ನವೀನ್, ಕುದ್ಮಾರು ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಪುಷ್ಪಾಲತಾ ಪಿ. ಗೌಡ, ತಿರಂಗಾ ವಾರಿಯರ್ಸ್ ಕುದ್ಮಾರು ಇದರ ಸಂಚಾಲಕ ಲೋಕೇಶ್ ಬಿ.ಎನ್., ಅಧ್ಯಕ್ಷ ಲೋಹಿತ್ ಕೆಡೆಂಜಿಕಟ್ಟ ಮಾತನಾಡಿದರು. ನರಸಿಂಹ ಪ್ರಸಾದ್ ಪಾಂಗಣ್ಣಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕುದ್ಮಾರಿನ ಚಾಪಳ್ಳ ಎಂಬಲ್ಲಿಂದ ಬರೆಪ್ಪಾಡಿ ತನಕ ರಸ್ತೆ ಬದಿಯಲ್ಲಿದ್ದ ಕಸ ಕಡ್ಡಿಗಳನ್ನು ಹೆಕ್ಕಿ ವಿಲೇವಾರಿ ಮಾಡಲಾಯಿತು. ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ವರ್ಗ, ಕೂರ, ಬರೆಪ್ಪಾಡಿ, ಬೆಳಂದೂರು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಈ ಸಂದರ್ಭದಲ್ಲಿದ್ದರು.

Also Read  KMSPico Download [Official KMSPico 2024 Edition]

error: Content is protected !!
Scroll to Top