ಉಡುಪಿ: ಎಂಡಿಎಂಎ, ಗಾಂಜಾ ಸಾಗಾಟ; ನಾಲ್ವರು ಬಂಧನ

(ನ್ಯೂಸ್ ಕಡಬ) newskadaba.com ಡಿ.30: ಕಾರು ಮತ್ತು ದ್ವಿಚಕ್ರವಾಹನದಲ್ಲಿ ಗಾಂಜಾ ಮತ್ತು ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಉಡುಪಿ ಸೆನ್ ಪೊಲೀಸರು ಡಿ. 28ರಂದು ಮಧ್ಯಾಹ್ನ ವೇಳೆ ಬಂಧಿಸಿದ್ದು, 7,86,330 ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.

ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಪ್ರೇಮನಾಥ್ ಯಾನೆ ಪ್ರೇಮ್ ಯಾನೆ ರೇವುನಾಥ್ (23), ಉಡುಪಿ ಪೆರ್ಡೂರಿನ ಶೈಲೇಶ್ ಶೆಟ್ಟಿ (24), ಕಾಪು ಬೊಮ್ಮರಬೆಟ್ಟು ನಿವಾಸಿ ಪ್ರಜ್ವಲ್ (28), ಮತ್ತು ಉಡುಪಿಯ ಬೊಮ್ಮರಬೆಟ್ಟುವಿನ ರತನ್ (27) ಬಂಧಿತರು.

Nk Cake House

ಬಂಧಿತರಿAದ 87,500 ಮೌಲ್ಯದ 1.112 ಕೆಜಿ ಗಾಂಜಾ, 2,00,000 ರೂ. ಮೌಲ್ಯದ 37.27 ಗ್ರಾಂ ಎಂಡಿಎಂಎ, 4 ಲಕ್ಷ ರೂ. ಮೌಲ್ಯದ ಕಾರು, 50,000 ರೂ. ಮೌಲ್ಯದ ದ್ವಿಚಕ್ರ ವಾಹನ, 7,130 ರೂ. ನಗದು, ಮತ್ತು 41,000 ರೂ. ಮೌಲ್ಯದ 5 ಮೊಬೈಲ್ ಫೋನ್‌ಗಳು ಸೇರಿ ಒಟ್ಟು 7,86,330ರೂ. ರೂ. ಮೌಲ್ಯದ ಸೊತ್ತನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಶಿರಾಡಿ: ಒಂಟಿಸಲಗ ದಾಳಿ ➤ ಓರ್ವ ಮೃತ್ಯು, ಮತ್ತೋರ್ವ ಗಂಭೀರ

error: Content is protected !!
Scroll to Top