ಕಾಸರಗೋಡು: ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಕೇಸ್; 14 ಆರೋಪಿಗಳು ದೋಷಿಗಳೆಂದು ತೀರ್ಪು ಪ್ರಕಟ

(ನ್ಯೂಸ್ ಕಡಬ) newskadaba.com ಡಿ. 28: ಯುವ ಕಾಂಗ್ರೆಸ್ ಕಾರ್ಯಕರ್ತರಾದ ಪೆರಿಯ ಕಳ್ಳಿಯೊಟ್ ನ ಶರತ್ ಲಾಲ್(19) ಮತ್ತು ಕೃಪೇಶ್ (20) ಹತ್ಯೆ ಪ್ರಕರಣದಲ್ಲಿ 14 ಆರೋಪಿಗಳನ್ನು ಎರ್ನಾಕುಲಂ ಸಿಬಿಐ ಕೋರ್ಟ್ ದೋಷಿಗಳೆಂದು ತೀರ್ಪು ನೀಡಿದೆ.

Nk Cake House

ಮಾಜಿ ಶಾಸಕ ಕೆ.ವಿ.ಕುಂಞಿರಾಮನ್ ಸೇರಿದಂತೆ 14 ಆರೋಪಿಗಳು. ನ್ಯಾಯಾಲಯ 10 ಮಂದಿಯನ್ನು ಖುಲಾಸೆಗೊಳಿಸಿದೆ. 1 ರಿಂದ 10 ಆರೋಪಿಗಳ ಮೇಲೆ ಕೊಲೆ ಆರೋಪವಿದ್ದು, ಶಿಕ್ಷೆಗೊಳಗಾದ 14 ಮಂದಿಯಲ್ಲಿ ಹತ್ತು ಮಂದಿ ಪ್ರಮುಖ ಸಿಪಿಎಂ ನಾಯಕರು. ಎ ಪೀತಾಂಬರನ್, ಸಿಪಿಎಂ ಪೆರಿಯ ಸ್ಥಳೀಯ ಸಮಿತಿಯ ಮಾಜಿ ಸದಸ್ಯ, ಸಾಜಿ ಸಿ. ಜಾರ್ಜ್, ಕೆ.ಎಂ. ಸುರೇಶ್, ಕೆ. ಅನಿಲ್ ಕುಮಾರ್, ಜಿಜಿನ್, ಆರ್. ಶ್ರೀರಾಗ್, ಎ. ಅಶ್ವಿನ್ ಮತ್ತು ಸುಬಿಶ್ ಕೊಲೆ ಆರೋಪಿಗಳು. ಒಂಬತ್ತನೇ ಪ್ರತಿವಾದಿ ಎ ಮುರಳಿ, ಟಿ ರಂಜಿತ್, ಕೆ. ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್, ಎ. ಸುರೇಂದ್ರನ್, ಉದುಮ ಮಾಜಿ ಶಾಸಕ ಕೆ.ವಿ. ಕುಂಞಿರಾಮನ್, ರಾಘವನ್ ವೆಲ್ತೋಳಿ ಮತ್ತು ಕೆ.ವಿ.ಭಾಸ್ಕರನ್ ಅವರನ್ನು ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

Also Read  ಬೆಂಗಳೂರಿನಲ್ಲಿ ಗುಡುಗು ಸಹಿತ ಧಾರಕಾರ ಮಳೆ

ನ್ಯಾಯಾಲಯ 292 ಸಾಕ್ಷಿಗಳನ್ನು ವಿಚಾರಣೆ ನಡೆಸಿತ್ತು. ಫೆಬ್ರವರಿ 17, 2019 ರಂದು ಕೊಲೆ ನಡೆದಿತ್ತು. ಮೊದಲಿಗೆ ಸ್ಥಳೀಯ ಪೊಲೀಸರ ವಿಶೇಷ ತಂಡ ಹಾಗೂ ನಂತರ ಅಪರಾಧ ವಿಭಾಗದ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು.

error: Content is protected !!
Scroll to Top