ವಿಲನ್ ಪಾತ್ರಕ್ಕೆ 200 ಕೋಟಿ ರೂ. ಸಂಭಾವನೆ ಪಡೆದ ಯಶ್

(ನ್ಯೂಸ್ ಕಡಬ) newskadaba.com ಡಿ. 28: ಸ್ಯಾಂಡಲ್‌ವುಡ್ ಸ್ಟಾರ್ ನಟ ಯಶ್ ಅವರು ವಿಲನ್ ಪಾತ್ರದಲ್ಲಿ ನಟಿಸಲು ಬರೋಬ್ಬರಿ 200 ಕೋಟಿ ರೂ. ಸಂಭಾನೆ ಪಡೆಯುತ್ತಿದ್ದಾರೆ. ಈ ಮೂಲಕ ವಿಲನ್ ಪಾತ್ರಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಎಂಬ ದಾಖಲೆಯನ್ನು ಯಶ್ ಬರೆದಿದ್ದಾರೆ.

ಭಾರತದ ಅತಿ ದೊಡ್ಡ ಸಿನಿಮಾ ಪ್ರಾಜೆಕ್ಟ್ ಆಗಿರುವ ರಾಮಾಯಣ ಕತೆ ಆಧರಿತ ಸಿನಿಮಾದ ಬಜೆಟ್ 1000 ಕೋಟಿಗೂ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಯಶ್, ರಾವಣನ ಪಾತ್ರದಲ್ಲಿ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದು, ಈ ಪಾತ್ರಕ್ಕಾಗಿ ಯಶ್ ಅವರು 200 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಆ್ಯಂಟಿ ಹೀರೋ ಪಾತ್ರ ನಿರ್ವಹಿಸಲು ನಟನೊಬ್ಬ ಇಷ್ಟು ದೊಡ್ಡ ಸಂಭಾವನೆ ಪಡೆಯುತ್ತಿರುವುದು ಎನ್ನಲಾಗಿದೆ.

Also Read  ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ ರಾಜೀನಾಮೆ ಅಂಗೀಕರಿಸಿದ ಭಾರತೀಯ ರೈಲ್ವೇ

Nk Cake House

ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತಾ ದೇವಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಲಿವುಡ್‌ನ ‘ಅವತಾರ್’ ಸಿನಿಮಾಕ್ಕೆ ಬಳಸಲಾಗಿರುವ ತಂತ್ರಜ್ಞಾನ ಬಳಸಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಹಾಲಿವುಡ್ ನ ಹಲವು ಕಲಾವಿದರು ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಆಸ್ಕರ್ ವಿಜೇತ ಹಾನ್ಸ್ ಜಿಮ್ಮರ್ ಈ ಸಿನಿಮಾಕ್ಕೆ ಸಂಗೀತ ನೀಡಲಿದ್ದಾರೆ. ಇನ್ನು ಸಿನಿಮಾದಲ್ಲಿ ರಾವಣನ ಪಾತ್ರ ನಿರ್ವಹಿಸುವುದರೊಂದಿಗೆ ಯಶ್ ಅವರು ಸಹ ನಿರ್ಮಾಪಕ ಕೂಡ ಆಗಿದ್ದಾರೆ. ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶಿಸುತ್ತಿದ್ದಾರೆ.

error: Content is protected !!
Scroll to Top