ಅಮೆರಿಕಾದಲ್ಲಿ ಶಿವರಾಜ್ ಕುಮಾರ್ ರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

(ನ್ಯೂಸ್ ಕಡಬ) newskadaba.com ಡಿ. 25  ಬೆಂಗಳೂರು:  ಅನಾರೋಗ್ಯದ ಕಾರಣ ಅಮೇರಿಕಾದಲ್ಲಿನ ಆಸ್ಪತ್ರೆಗೆ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ನಟ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಇದೀಗ ಮುಂದಿನ ಹಂತದ ಚಿಕಿತ್ಸೆಗಳಿಗಾಗಿ ಅಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ.

ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯದ ಕಾರಣ ಅಮೇರಿಕಾದ ಪ್ಲೋರಿಡಾದಲ್ಲಿರುವಂತ ಮಿಯಾಮಿ ಕ್ಯಾನ್ಸರ್ ಇನ್ಟಿಟ್ಯೂಟ್ ಗೆ ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇದೀಗ ಅವರಿಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಯಶಸ್ವಿಯಾಗಿದೆ ಎನ್ನಲಾಗಿದೆ. ಅವರ ಲಕ್ಷಾಂತರ ಅಭಿಮಾನಿಗಳ ಹಾರೈಕೆ, ಪ್ರಾರ್ಥನೆ ಫಲಿಸಿದೆ. ನಟ ಶಿವರಾಜ್ ಕುಮಾರ್ ಅವರಿಗೆ ವೈದ್ಯರು ನಿನ್ನೆ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಆ ಬಳಿಕ ಅವರು ಆಸ್ಪತ್ರೆಯಲ್ಲೇ ಒಂದು ತಿಂಗಳ ಕಾಲ ವಿಶ್ರಾಂತಿಯನ್ನು ಪಡೆಯಲಿದ್ದಾರೆ.

Also Read  ಮಂಗಳೂರು: ಕಾರ್ಯಕ್ರಮವೊಂದಕ್ಕೆ ನುಗ್ಗಿ ದಾಂಧಲೆ ಪ್ರಕರಣ ➤ ಆರು ಮಂದಿ ಭಜರಂಗದಳದ ಕಾರ್ಯಕರ್ತರ ಬಂಧನ..!

Nk Cake House

error: Content is protected !!
Scroll to Top