ಬೆಂಗಳೂರು: ಶೀಘ್ರದಲ್ಲೇ ಆಟೋ ದರಲ್ಲೂ ಏರಿಕೆ, ಪ್ರತಿ ಕಿ.ಮೀಗೆ 5 ರೂ. ಹೆಚ್ಚಳ ಸಾಧ್ಯತೆ..!

(ನ್ಯೂಸ್ ಕಡಬ) newskadaba.com ಡಿ. 24  ಬೆಂಗಳೂರು: ಹೊಸ ವರ್ಷಕ್ಕೆ ಜನ ಸಾಮಾನ್ಯರಿಗೆ ಆಟೋ ದರ ಏರಿಕೆ ಶಾಕ್ ಸಿಗುವ ಸಾಧ್ಯತೆ ದಟ್ಟವಾಗುತ್ತಿದೆ. ಪ್ರತಿ ಒಂದು ಕಿಲೋ ಮೀಟರ್ ಗೆ 5 ರೂಪಾಯಿವರೆಗೆ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.

ತೈಲಬೆಲೆ ಏರಿಕೆ, ಬಿಡಿಭಾಗಗಳ ಬೆಲೆ ಏರಿಕೆ, ದೈನಂದಿನ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ, ಆಟೋ ಮಿನಿಮಮ್ ದರವನ್ನು ಏರಿಸಬೇಕೆಂದು ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ ಆಗ್ರಹಿಸುತ್ತಿದ್ದಾರೆ. ಪ್ರತಿ ಒಂದು ಕಿಲೋ ಮೀಟರ್ ದೂರಕ್ಕೆ 15 ರೂಪಾಯಿಂದ 20 ರೂಪಾಯಿಗೆ ಮತ್ತು 2 ಕಿಲೋ ಮೀಟರ್ ದೂರಕ್ಕೆ 30 ರೂಪಾಯಿಯಿಂದ 40 ರೂಪಾಯಿಗೆ ದರ ಪರಿಷ್ಕರಿಸುವಂತೆ ಒತ್ತಾಯಿಸಿದ್ದಾರೆ.

Also Read  ಭೀಕರ ರಸ್ತೆ ಅಪಘಾತ - ಡಿವೈಡರ್ ಗೆ ಕಾರು ಢಿಕ್ಕಿಯಾಗಿ ಮೂವರ ದುರ್ಮರಣ

ದರ ಪರಿಷ್ಕರಣೆ ಕುರಿತು ಸೋಮವಾರ ರಾಜ್ಯ ಸಾರಿಗೆ ಇಲಾಖೆ ಹಾಗೂ ಆಟೋ ಯೂನಯನ್ ಗಳು ಸಭೆ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿದ್ದು, ಪ್ರಯಾಣ ದರ ಹೆಚ್ಚಳ ಬೇಡಿಕೆ ಪರಿಗಣನೆಯಾಗುವ ಸಾಧ್ಯತೆ ಎಂದು ಸಾರಿಗೆ ಇಲಾಖೆ ಮೂಲಗಳಉ ತಿಳಿಸಿವೆ.

Nk Cake House

error: Content is protected !!
Scroll to Top