ಸಾಮಾಜಿಕ ಮಾಧ್ಯಮದ ಪ್ರಭಾವಿ ಯುವತಿಯರೇ ಸೈಬರ್ ವಂಚಕರ ಟಾರ್ಗೆಟ್!

(ನ್ಯೂಸ್ ಕಡಬ) newskadaba.com ಡಿ. 24: ಬೆಂಗಳೂರು: ದಿನಗಳು ಕಳೆದಂತೆಲ್ಲಾ ಸೈಬರ್ ವಂಚಕರು ಹೊಸ ಹೊಸ ವೇಷ ತೊಟ್ಟು ವಂಚಿಸುವ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ಟ್ರೆಂಡ್‌ನಲ್ಲಿ ಲಾಭದಾಯಕ ಸಹಯೋಗದ ಅವಕಾಶ ನೀಡುವ ಬ್ರ್ಯಾಂಡ್‌ಗಳು ಅಥವಾ ಏಜೆನ್ಸಿಗಳ ಸೋಗಿನಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿಗಳನ್ನು ಅದರಲ್ಲೂ ಮಹಿಳಾ ಪ್ರಭಾವಿಗಳನ್ನು ಗುರಿಯಾಗಿಸಿಕೊಂಡು ವಂಚನೆಗೆ ಮುಂದಾಗಿದ್ದಾರೆ.

ವೃತ್ತಿಪರ ಪಾಲುದಾರಿಕೆಯ ಹೆಸರಿನಲ್ಲಿ ಈ ವಂಚಕರು ಮಹಿಳೆಯರ ವೈಯಕ್ತಿಕ ಮಾಹಿತಿ, ಫೊಟೋಗಳು ಮತ್ತು ವಿಡಿಯೋಗಳನ್ನು ಕೇಳುತ್ತಾರೆ. ಕೃತಕ ಬುದ್ಧಿಮತ್ತೆ (AI) ಮತ್ತು ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು, ಅವುಗಳನ್ನು ತಿರುಚುತ್ತಾರೆ. ನಂತರ ಬ್ಲ್ಯಾಕ್‌ಮೇಲ್ ಅಥವಾ ಸುಲಿಗೆ ಮಾಡುತ್ತಿದ್ದಾರೆ.

Also Read  ಸಚಿವ ಶ್ರೀರಾಮುಲು ಅವರಿಗೆ ಮಾತೃ ವಿಯೋಗ.!

Nk Cake House

ಸೈಬರ್ ವಂಚಕರು ಮೊದಲಿಗೆ ವೈಯಕ್ತಿಕ ಮಾಹಿತಿ, ಫೊಟೋಗಳು ಮತ್ತು ವಿಡಿಯೋಗಳನ್ನು ಸಂಗ್ರಹಿಸುತ್ತಾರೆ. ನಂತರ ಸಂತ್ರಸ್ತರಿಗೆ ಬೆದರಿಕೆ ಹಾಕಲು ಅವುಗಳನ್ನು ತಿರುಚುತ್ತಾರೆ. ಈ ಫೊಟೋ ಅಥವಾ ವಿಡಿಯೋಗಳನ್ನು ಕುಟುಂಬ ಸದಸ್ಯರೊಂದಿಗೆ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗುವುದು ಎಂದು ಬೆದರಿಕೆಯೊಡ್ಡುವ ಮೂಲಕ ಹಣ ಸುಲಿಗೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುವುದನ್ನು ತಪ್ಪಿಸಬೇಕು. ಅಂತಹ ಸಂದರ್ಭದಲ್ಲಿ, ನಾಗರಿಕರು ಸೈಬರ್ ಕ್ರೈಂ ಸಹಾಯವಾಣಿ ಸಂಖ್ಯೆ ‘1930’ ಅನ್ನು ಸಂಪರ್ಕಿಸಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Also Read  ಯೋಧನ ಜೀವ ಉಳಿಸಿ ಪ್ರಾಣತೆತ್ತ ಸೇನಾ ಶ್ವಾನ 'ಕೆಂಟ್'...!

error: Content is protected !!
Scroll to Top