ಡ್ರೋನ್ ಪ್ರತಾಪ್‌ಗೆ ಜಾಮೀನು ಮಂಜೂರು- ಇಂದು ಜೈಲಿನಿಂದ ಹೊರಬರುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಡಿ. 24: ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಡ್ರೋನ್ ಪ್ರತಾಪ್ ಅವರಿಗೆ ಜಾಮೀನು ಮಂಜೂರಾಗಿದ್ದು, ಇಂದು ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅವರು ಜೈಲಿನಿಂದ ಹೊರಬರುವ ಸಾಧ್ಯತೆಯಿದೆ.

Nk Cake House

ಡಿ.23 ರಂದು ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಡ್ರೋನ್ ಪ್ರತಾಪ್‌ಗೆ ಜಾಮೀನು ನೀಡಿ ತೀರ್ಪು ನೀಡಿದೆ. ಪ್ರತಾಪ್ ಅವರನ್ನು ಡಿ.16 ರಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆ ಬಳಿಕ ಕೋರ್ಟ್ ಅವರಿಗೆ ಡಿಸೆಂಬರ್ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಮಧುಗಿರಿ 4ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಪ್ರತಾಪ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಇಂದು ಜೈಲಿನಿಂದ ಹೊರಬಲಿದ್ದಾರೆ ಎನ್ನಲಾಗುತ್ತಿದೆ.

Also Read  ಬೆಂಗಳೂರು: ಶೀಘ್ರದಲ್ಲೇ ಆಟೋ ದರಲ್ಲೂ ಏರಿಕೆ, ಪ್ರತಿ ಕಿ.ಮೀಗೆ 5 ರೂ. ಹೆಚ್ಚಳ ಸಾಧ್ಯತೆ..!

error: Content is protected !!
Scroll to Top