(ನ್ಯೂಸ್ ಕಡಬ) newskadaba.com ಡಿ. 23 : ವಿಜಯ ನಗರ ಜಿಲ್ಲೆಯ ಕೂಡ್ಲುಗಿ ತಾಲೂಕಿನ ಪ್ರಸ್ತುತ ಸಂತೆಕಟ್ಟೆ ಸುಬ್ರಹ್ಮಣ್ಯ ನಗರ ನಿವಾಸಿ 9 ನೇ ತರಗತಿ ವಿದ್ಯಾರ್ಥಿ ಕೆ. ಮಣಿಕಂಠ (15) ಡಿ. 19 ರಂದು ಶಾಲೆಗೆ ಹೋಗಿದ್ದು, ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
ಈತ ಸಂತೆಕಟ್ಟೆ ಮಿಲಾಗ್ರಿಸ್ ಹೈಸ್ಕೂಲ್ನಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದ. 4.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಬಣ್ಣದ ಟೀ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದ. ಕನ್ನಡ ಭಾಷೆ ಬಲ್ಲವನಾಗಿದ್ದಾನೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಸುಳಿವು ಸಿಕ್ಕರೆ 7483006010 ಸಂಪರ್ಕಿಸುವAತೆ ಪೋಷಕರು ಮನವಿ ಮಾಡಿದ್ದಾರೆ.