(ನ್ಯೂಸ್ ಕಡಬ) newskadaba.com ಡಿ. 23 ನವದೆಹಲಿ: ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಭಾರತದ ಆಂಧ್ರ ಪ್ರದೇಶ, ನೆರೆಯ ನೇಪಾಳ, ಕ್ಯೂಬಾ ಮತ್ತು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ದ್ವೀಪರಾಷ್ಟ್ರ ವನವಾಟುವಿನಲ್ಲಿ ಭಾರಿ ಕಂಪನ ದಾಖಲಾಗಿವೆ.
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕಳೆದ ಮೂರು ದಿನಗಳಲ್ಲಿ ಮೂರನೇ ಬಾರಿಗೆ ಕಂಪನದ ಅನುಭವವಾಗಿದೆ. ಜಿಲ್ಲೆಯ ಮುಂಡ್ಲಮೂರಿನಲ್ಲಿ ಇಂದು ಕೂಡ ಭೂಕಂಪನದ ಅನುಭವವಾಗಿದ್ದು, ಕಳೆದ ಮೂರು ದಿನಗಳಿಂದ ಮುಂಡ್ಲಮೂರಿನಲ್ಲಿ ಸತತ ಭೂಕಂಪನ ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಶನಿವಾರ ಮತ್ತು ಭಾನುವಾರ ಬೆಳಗ್ಗೆ 10:35ಕ್ಕೆ ಭೂಮಿ ಕಂಪಿಸಿತು. ಇಂದು ಮತ್ತೊಮ್ಮೆ ಕಂಪನದ ಅನುಭವವಾಗಿದೆ. ಇದರಿಂದ ಜನರು ಮನೆ ಬಿಟ್ಟು ಓಡಿ ಬಂದರು. ಶನಿವಾರ ಮತ್ತು ಭಾನುವಾರದಂದು ಕಂಪಿಸಿದ ಕಾರಣ ಮನೆಗಳಲ್ಲಿನ ವಸ್ತುಗಳು ಸಹ ಅಲುಗಾಡಿದವು. ಮೂರು ದಿನಗಳಿಂದ ಭೂಮಿ ಕಂಪಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಆ ಪ್ರದೇಶದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ್ಲ ಮತ್ತು ಕಳವಳ ವ್ಯಕ್ತಪಡಿಸುತ್ತಿದ್ದಾರೆ.