ಬಂಟ್ವಾಳ : ಪರಿಶಿಷ್ಟ ಜಾತಿ, ಪಂಗಡಗಳ ಪರಿಸರದಲ್ಲಿ ತ್ಯಾಜ್ಯ ಸಂಗ್ರಹ – ಉಗ್ರ ಹೋರಾಟದ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಡಿ. 20: ಪರಿಶಿಷ್ಟ ಜಾತಿ, ಪಂಗಡಗಳ ಪರಿಸರದಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ತಕ್ಷಣ ಕ್ರಮಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ದಲಿತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಎಸ್.ಪಿ. ಆನಂದ ಎಚ್ಚರಿಕೆ ನೀಡಿದ್ದಾರೆ.

ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುದಕಟ್ಟೆ ಕೊರಗರ ಕಾಲನಿಯ ಆಸು ಪಾಸಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಗೂ ಸಾರ್ವಜನಿಕರು ವಾಸಿಸುವ ಮನೆಗಳ ಪಕ್ಕದಲ್ಲಿ ಬೇರೆ ಬೇರೆ ಕಡೆಗಳಿಂದ ತ್ಯಾಜ್ಯಗಳನ್ನು ಶೇಖರಿಸಿ 20 ಅಡಿ ಆಳದ ಹೊಂಡದಲ್ಲಿ ಹಾಕುತ್ತಿದ್ದಾರೆ. ಇದರಿಂದಾಗಿ ಪರಿಸರದಲ್ಲಿ ದುರ್ವಾಸನೆ ಹರಡಿ ಮಾರಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಮುಂತಾದ ರೋಗಗಳಿಗೆ ಇಲ್ಲಿಯ ಮಂದಿ ತುತ್ತಾಗುತ್ತಿದ್ದಾರೆ. ತಕ್ಷಣ ಇದನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಕರ್ನಾಟಕ ದಲಿತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಎಸ್.ಪಿ. ಆನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸದ್ರಿ ಹೊಂಡದ ಬದಿಯಲ್ಲಿಯೇ ಪಂಚಾಯತ್‌ ವತಿಯಿಂದ ಕೊರೆದ ಕೊಳವೆ ಬಾವಿ, ಹಾಗೇನೆ ಸರಕಾರದ ವತಿಯಿಂದ ತೋಡಿಸಲಾದ 2 ನೀರಿನ ಬಾವಿಗಳಿಗೆ ಈ ತ್ಯಾಜ್ಯ ಸಂಗ್ರಹದ ಕಲ್ಮಶ ನೀರು ಸೋರಿ ಬಾವಿಗಳ ಹಾಗೂ ಕೊಳವೆ ಬಾವಿಗಳ ನೀರನ್ನೇ ಈ ವಠಾರದಲ್ಲಿ ವಾಸಿಸುವ ಮಂದಿ ಕುಡಿಯಲು, ಅಡುಗೆ ಮಾಡಲು ಬಳಸುವಂತ ಪರಿಸ್ಥಿತಿ ಇದೆ ಎಂದು ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ಯಶವಂತ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top