(ನ್ಯೂಸ್ ಕಡಬ) newskadaba.com ಡಿ. 20:ಮಂಗಳೂರು ನಗರದ ಕದ್ರಿ ಪಾರ್ಕ್ನಲ್ಲಿ ನಡೆದಿದ್ದ ಎರಡು ವಾರಾಂತ್ಯಗಳಲ್ಲಿ ನಡೆದ ವೈನ್ ಮೇಳಕ್ಕೆ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ಕ್ರಿಸ್ಮಸ್ ಹಬ್ಬ ಹಾಗೂ ಹೊಸ ವರ್ಷದ ಅಂಗವಾಗಿ ಗ್ರಾಹಕರಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ ಡಿ.22ರಂದು ಮತ್ತೆ ಕದ್ರಿ ಪಾರ್ಕ್‌ನಲ್ಲಿ ಬೆಳಗ್ಗೆ 10:30ರಿಂದ ರಾತ್ರಿ 9:30 ಗಂಟೆ ತನಕ ವೈನ್ ಮೇಳ ಆಯೋಜಿಸಲಾಗಿದೆ.
ರತ್ನಾಸ್ ವೈನ್ ಗೇಟ್ ಹಾಗೂ ಶೂಲಿನ್ ಗ್ರೂಪ್ ಮಂಗಳೂರು ಪ್ರಾಯೋಜಕತ್ವದಲ್ಲಿ ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ವೈನ್ ಮೇಳ ನಡೆಯಲಿದೆ. ದ್ರಾಕ್ಷಾ ರಸದ ಉಪಯೋಗಗಳು, ಸವಿಯುವ ಕ್ರಮ ಮುಂತಾದ ಸೂಕ್ತ ಮಾಹಿತಿಗಳೊಂದಿಗೆ ಬ್ರ್ಯಾಂಡ್‌ಗಳ ಪ್ರದರ್ಶನ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಉತ್ಪನ್ನಗಳು, ಎಲ್ಲಾ ಕಂಪನಿಗಳ ಹೊಸ ಹೊಸ ಪಾನೀಯಗಳನ್ನು ಪ್ರದರ್ಶಿಸಲಾಗುತ್ತಿದೆ. ಗ್ರಾಹಕರು ದ್ರಾಕ್ಷಾ ರಸದ (ವೈನ್) ರುಚಿಯನ್ನು ಸವಿದು ಇಷ್ಟವಾದ ಬ್ರ್ಯಾಂಡ್‌ಗಳನ್ನು ಅತ್ಯಾಕರ್ಷಕ ದರದಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಿಶೇಷವಾಗಿ ಎಲ್ಲ ವೈನ್ ಕಂಪನಿಗಳವರು ಬಂದು ಅವರವರ ಉತ್ಪನ್ನಗಳ ಪರಿಚಯ ಮತ್ತು ಪ್ರದರ್ಶನವನ್ನು ನೀಡಲಿರುವರು.