(ನ್ಯೂಸ್ ಕಡಬ) newskadaba.com ಡಿ. 20. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪೆರ್ನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಾಂಧಿನಗರದಲ್ಲಿನ ಹಿಂದೂ ರುದ್ರ ಭೂಮಿಯನ್ನು ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭ ಕೆದಿಲ ಒಕ್ಕೂಟದ ಸದಸ್ಯರಾದ ಜಗದೀಶ, ಶೀನಪ್ಪ, ವೆಂಕಪ್ಪ, ಗಿರೀಶ ಹಾಗೂ ಕೆದಿಲ “B” ಒಕ್ಕೂಟದ ಸೇವಾಪ್ರತಿನಿಧಿ ಜಯಂತಿರವರು ಉಪಸ್ಥಿತರಿದ್ದರು.