(ನ್ಯೂಸ್ ಕಡಬ) newskadaba.com ಡಿ. 19. ಎಂಡೋಸಲ್ಫಾನ್ ಸಂತ್ರಸ್ತರ ಉಚಿತ ಆರೋಗ್ಯ ತಪಾಸಣಾ ಶಿಬಿರವು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಪುತ್ತೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಯಿಲ ಮತ್ತು ಆಲಂಕಾರು ಗ್ರಾಮ ಪಂಚಾಯತ್ ನ ಸಹಕಾರದಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಂಗಳವಾರದಂದು ನಡೆಯಿತು.
ಮಂಗಳೂರು ಅತ್ತಾವರ ಕೆ.ಎಂ.ಸಿ ಆಸ್ಪತ್ರೆಯ ಎಲುಬು ಮತ್ತು ಮೂಳೆ ಚಿಕಿತ್ಸಾ ವಿಭಾಗ ಹಾಗೂ ಸಾಮಾನ್ಯ ರೋಗ ವಿಭಾಗದ ತಜ್ವ ವೈದ್ಯರುಗಳು ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಆಲಂಕಾರು, ಪೆರಾಬೆ ಮತ್ತು ಕುಂತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಂಡೋಪೀಡಿತರು ಹಾಗೂ ವಿಶೇಷಚೇತನರು ಶಿಬಿರದ ಪ್ರಯೋಜನ ಪಡೆದುಕೊಂಡರು. ಕುಂತೂರು ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ರಮ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಆಲಂಕಾರು ಗ್ರಾಮದ ಶ್ರೀಮತಿ ಸರೋಜಿನಿ, ಪೆರಾಬೆಯ ಶ್ರೀಮತಿ ಲೀಲಾವತಿ.
ವಿಶೇಷಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಆಲಂಕಾರು ಗ್ರಾಮ ಪಂಚಾಯತ್ ನ ಮೋನಪ್ಪ ಬರೆಪುದೇಲು ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರಾದ ಆಲಂಕಾರು ಗ್ರಾಮದ ಶ್ರೀಮತಿ ಡೀಕಮ್ಮ, ಶ್ರೀಮತಿ ಮೀನಾಕ್ಷಿ, ಪೆರಾಬೆ ಗ್ರಾಮದ ಶ್ರೀಮತಿ ಲಿಸ್ಸಿ, ಶ್ರೀಮತಿ ಜಿರಿಜಾ, ಶ್ರೀಮತಿ ಅಮೃತಾ,ಶ್ರೀಮತಿ ವಿನೋದಿನಿ ಉಪಸ್ಥಿತರಿದ್ದರು.