ಉಸ್ತುವಾರಿ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ) newskadaba.com ಡಿ. 19. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಡಿಸೆಂಬರ್ 23 ಮತ್ತು 24ರಂದು ದ.ಕ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಡಿಸೆಂಬರ್ 23ರಂದು ಸೋಮವಾರ ಬೆಳಿಗ್ಗೆ 10:15ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ, 10:45 – ಮಂಗಳೂರು ಬೀದಿಬದಿ ವ್ಯಾಪಾರಸ್ಥರ ವಲಯ ಉದ್ಘಾಟನೆ,  11- ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ, ಮಧ್ಯಾಹ್ನ 1:30 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ, ಕಲ್ಯಾಣ ಮಂಟಪದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಅವರ ಪುತ್ರನ ವಿವಾಹ ಕಾರ್ಯಕ್ರಮ.

ಮಧ್ಯಾಹ್ನ 2 – ಬೀಚ್ ಫೆಸ್ಟಿವಲ್ ಕರ್ಟನ್ ರೈಸಿಂಗ್ ಕಾರ್ಯಕ್ರಮ, 2:30 – ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಮುಂದುವರಿದ ಸಭೆ, ಸಂಜೆ 7:30 ಗಂಟೆಗೆ ತೊಕ್ಕೊಟ್ಟುವಿನಲ್ಲಿ ಶಾಸಕ ಐವನ್ ಡಿಸೋಜಾ ಅವರ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆ ಕಾರ್ಯಕ್ರಮ. ರಾತ್ರಿ ನಗರದಲ್ಲಿ ವಾಸ್ತವ್ಯ.

Also Read  ಚಾರ್ವಾಕ ಪ್ರಾ.ಕೃ.ಸ.ಸಂಘದ ಶತಮಾನೋತ್ಸವ - ಸವಿನೆನಪಿಗಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ

ಡಿಸೆಂಬರ್ 24ರಂದು ಬೆಳಿಗ್ಗೆ 9:30 – ಬೆಳ್ತಂಗಡಿ ತಾಲೂಕು ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಗುದ್ದಲಿ ಪೂಜೆ, 10:45 – ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಬಿಪಿಎಚ್ ಲ್ಯಾಬ್ ಕಟ್ಟಡ ಉದ್ಘಾಟನೆ, 11.45 – ಉಪ್ಪಿನಂಗಡಿಯಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟನೆ, 12:30- ಪುತ್ತೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಬಿಪಿಎಚ್ ಲ್ಯಾಬ್ ಕಟ್ಟಡ ಹಾಗೂ ಇತರ ಕಾಮಗಾರಿಗಳ ಶಂಕುಸ್ಥಾಪನೆ.

ಮಧ್ಯಾಹ್ನ 12:45 ಪುತ್ತೂರು ಪುರಭವನದಲ್ಲಿ ಪುತ್ತೂರು ತಾಲೂಕಿನ ವಿವಿಧ ಉಪಕೇಂದ್ರ ಕಟ್ಟಡಗಳ ಶಂಕುಸ್ಥಾಪನೆ ಸಭಾ ಕಾರ್ಯಕ್ರಮ, ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟನೆ ಸಭಾ ಕಾರ್ಯಕ್ರಮ, ಕಾರ್ಮಿಕ ಇಲಾಖೆಯ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಟೂಲ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸುವರು.

Also Read  ಕುಕ್ಕೆಯಲ್ಲಿ ಮನೆಮಾಡಿದ ಲಕ್ಷದೀಪೋತ್ಸವದ ಸಂಭ್ರಮ

ಮಧ್ಯಾಹ್ನ 2:15 – ಪಾಣೆಮಂಗಳೂರು ಬೊಂಡಾಲದಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಉದ್ಘಾಟನೆ, ಸಂಜೆ 4- ಜೋಕಟ್ಟೆ ಆಯುರ್ವೇದ ಆಸ್ಪತ್ರೆಯಲ್ಲಿ ಆಯುಷ್ ಇಲಾಖೆಯ 6 ಹಾಸಿಗೆಗಳ ಆಯುರ್ವೇದ ಆಸ್ಪತ್ರೆ ನೂತನ ಕಟ್ಟಡದ ಶಂಕುಸ್ಥಾಪನೆ, ಸಂಜೆ 6:40 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಸಚಿವರು ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ.

error: Content is protected !!
Scroll to Top