ರಬ್ಬರ್ ಕೃಷಿಗೆ ಆರ್ಥಿಕ ನೆರವು – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಡಿ. 19. ರಬ್ಬರ್ ಕೃಷಿಗೆ ಆರ್ಥಿಕ ನೆರವು ನೀಡಲು ರಬ್ಬರ್ ಮಂಡಳಿಯಿಂದ 2023 ಮತ್ತು 2024ರಲ್ಲಿ ಮರುನಾಟಿ ಮಾಡಿದ ಅಥವಾ ಹೊಸದಾಗಿ ನಾಟಿ ಮಾಡಿದ ರಬ್ಬರ್ ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗರಿಷ್ಠ 5 ಹೆಕ್ಟೇರ್‍ಗಳ ವರೆಗೆ ರಬ್ಬರ್ ಪ್ರದೇಶವನ್ನು ಹೊಂದಿರುವವರು ಷರತ್ತುಗಳಿಗೆ ಒಳಪಟ್ಟು 5 ಹೆಕ್ಟೇರ್‍ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ. ಕೇಂದ್ರ ಸರ್ಕಾರದ “ಸರ್ವಿಸ್ ಪ್ಲಸ್” ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ.

Nk Cake House

ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸಲು ಗ್ರಾಮಾಧಿಕಾರಿಗಳ ಅರ್ಜಿಯೊಂದಿಗೆ ಪ್ರಮಾಣಪತ್ರ ಅಥವಾ ಪಹಣಿ ಪತ್ರ (RTC), ಸಾಗುವಳಿ ಜಮೀನಿನ ಗಡಿ ತೋರಿಸುವ ಅಂದಾಜು ನಕ್ಷೆ, ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ರಬ್ಬರ್ ಸಸಿಗಳ ಖರೀದಿಸಿದ ಪುರಾವೆ/ರಶೀದಿ, ಜಂಟಿ ಮಾಲೀಕರು ಮತ್ತು ಅಪ್ರಾಪ್ತ ವಯಸ್ಕರಿದ್ದಲ್ಲಿ ನಾಮನಿರ್ದೇಶನ ಪ್ರತಿಗಳನ್ನು ಅಪ್‍ಲೋಡ್ ಮಾಡಬೇಕು.

Also Read  ಸೆ.17 - ವಿಶ್ವಕರ್ಮ ಜಯಂತಿ

ಸಾಂಪ್ರದಾಯಿಕವಲ್ಲದ ಪ್ರದೇಶದಲ್ಲಿ ಸಬ್ಸಿಡಿ ಮೊತ್ತ ರೂ. 50,000/ ಹೆಕ್ಟೇರ್‍ನಂತೆ 5 ಹೆಕ್ಟೇರ್‍ಗೆ ಸೀಮಿತವಾಗಿದೆ. ರೂಟ್ ಟ್ರೈನರ್ ಸಸಿಗಳು ಅಥವಾ ಪಾಲಿ ಬ್ಯಾಗ್ ಸಸಿಗಳನ್ನು ಬಳಸಿ ಹೊಸನಾಟಿ ಮತ್ತು ಮರುನಾಟಿ ಮಾಡಿರುವ ಬೆಳೆಗಾರರಿಗೆ ಮತ್ತು RPS/ ಗುಂಪುಗಳಿಗೆ ಪರಿವೀಕ್ಷಣೆ ನಂತರ ಅರ್ಹ ಆರ್ಥಿಕ ಸಹಾಯವನ್ನು ಮೊದಲ ವರ್ಷದಲ್ಲಿ ಪ್ರತಿ ಹೆಕ್ಟೇರಿಗೆ ರೂ 40,000 ಮತ್ತು 10,000 ದಂತೆ ಎರಡು ಕಂತುಗಳಲ್ಲಿ ಬೆಳೆಗಾರರ ಖಾತೆಗೆ ಜಮಾ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸ : rubberboard.gov.in ನಿಂದ ಅಥವಾ ಪ್ರಾದೇಶಿಕ ಕಚೇರಿಗಳು, ಕ್ಷೇತ್ರ ಕೇಂದ್ರಗಳು ಮತ್ತು ರಬ್ಬರ್ ಮಂಡಳಿಯ ಕಾಲ್‍ಸೆಂಟರ್ (0481-257 6622) ಅಥವಾ ಪ್ರಧಾನ ಕಚೇರಿ ಕೊಟ್ಟಾಯಂ ನಿಂದ ಪಡೆಯುವಂತೆ ರಬ್ಬರ್ ಮಂಡಳಿ ಮಂಗಳೂರು ಪ್ರಾದೇಶಿಕ ಕಚೇರಿ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top