ರಾಜಸ್ಥಾನದಲ್ಲಿ 50 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ

(ನ್ಯೂಸ್ ಕಡಬ) newskadaba.com ಡಿ. 17 ನವದೆಹಲಿ: ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜಸ್ಥಾನದ ಜೈಪುರದಲ್ಲಿ ಸುಮಾರು 50 ಸಾವಿರ ಕೋಟಿ ರೂ.ಗಳ 24 ಯೋಜನೆಗಳನ್ನು ಉದ್ಘಾಟಿಸಿದರು. ಇಂಧನ, ರಸ್ತೆ, ರೈಲ್ವೇ ಮತ್ತು ಜಲ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳಿಗೆ ಪ್ರಧಾನಮಂತ್ರಿ ಮೋದಿ ಶಂಕುಸ್ಥಾಪನೆ ಮಾಡಿದರು.

ಭಜನ್ ಲಾಲ್ ಮತ್ತು ಅವರ ಇಡೀ ತಂಡವು ರಾಜಸ್ಥಾನದ ಅಭಿವೃದ್ಧಿಗೆ ಹೊಸ ದಿಕ್ಕು ನೀಡಲು ತುಂಬಾ ಶ್ರಮಿಸಿದೆ ಎಂದು ಅವರು ಹೇಳಿದರು. ಇಂದು ಉದ್ಘಾಟನೆಗೊಂಡ ಯೋಜನೆಗಳು ರಾಜಸ್ಥಾನದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿವೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಯೋಜನೆಗಳು ರಾಜಸ್ಥಾನವನ್ನು ದೇಶದ ಅತ್ಯಂತ ಸಂಪರ್ಕಿತ ರಾಜ್ಯಗಳಲ್ಲಿ ಒಂದನ್ನಾಗಿ ಮಾಡುತ್ತದೆ. ಇದು ರಾಜಸ್ಥಾನದಲ್ಲಿ ಹೂಡಿಕೆಯನ್ನು ಉತ್ತೇಜಿಸುತ್ತದೆ ಮತ್ತು ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ರಾಜಸ್ಥಾನದ ಪ್ರವಾಸೋದ್ಯಮ, ಇಲ್ಲಿನ ರೈತರು ಮತ್ತು ಯುವಕರು ಇದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ ಎಂದು ಮೋದಿ ವಿವರಿಸಿದ್ದಾರೆ. ಈ ಯೋಜನೆಗಳು ರಾಜಸ್ಥಾನದ ಶೇ. 100ರಷ್ಟು ಮನೆಗಳಿಗೆ ಆದಷ್ಟು ಬೇಗ ನಲ್ಲಿ ನೀರನ್ನು ಒದಗಿಸುವ ವಿಶ್ವಾಸವಿದೆಎಂದು ಮೋದಿ ಹೇಳಿದರು.

Also Read  ಸಂಘ-ಸಂಸ್ಥೆಗಳ ಚುನಾವಣೆಯಲ್ಲಿ ಶಿಕ್ಷಕರು ಸ್ಪರ್ಧಿಸುವಂತಿಲ್ಲ: ಶಿಕ್ಷಣ ಇಲಾಖೆ

error: Content is protected !!
Scroll to Top