ಸಿ’ ಫೋರ್ ಚುನಾವಣಾ ಪೂರ್ವ ಸಮೀಕ್ಷೆ ► ಮುಂಬರುವ ಚುನಾವಣೆಯಲ್ಲಿ ಈ ಪಕ್ಷ ಬಹುಮತದಿಂದ ಅಧಿಕಾರ ಹಿಡಿಯಲಿದೆಯಂತೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ.26. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಬಗ್ಗೆ ಸಿ-ಫೋರ್ ಸಂಸ್ಥೆಯು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೇರಲಿದೆ ಎಂದು ತಿಳಿದುಬಂದಿದೆ.

ಕಳೆದ ಬಾರಿ 122 ಸೀಟುಗಳನ್ನು ಗೆದ್ದಿದ್ದ ಕಾಂಗ್ರೆಸ್ ಪಕ್ಷವು ಈ ಬಾರಿ 126 ಸೀಟುಗಳನ್ನು ಗೆಲ್ಲಲಿದ್ದು, ಬಿಜೆಪಿಯ ಸ್ಥಾನಗಳೂ ಕೂಡ ಹೆಚ್ಚಲಿವೆ. ಈ ಬಾರಿ ಬಿಜೆಪಿ 70 ಸೀಟುಗಳನ್ನು ಗೆಲ್ಲಲಿದೆ. 2013ರಲ್ಲಿ ಬಿಜೆಪಿ 40 ಸೀಟುಗಳನ್ನು ಗೆದ್ದಿತ್ತು. ಜೆಡಿಎಸ್ ಸೀಟುಗಳು 40ರಿಂದ 27ಕ್ಕೆ ಕುಸಿಯಲಿದೆ ಎಂದು ಸಮೀಕ್ಷೆ ಹೇಳಿದೆ. 2018 ರ ಮಾರ್ಚ್ 01 ರಿಂದ 25 ರವರೆಗೆ 154 ವಿಧಾಸಭಾ ಕ್ಷೇತ್ರಗಳ 22,357 ಮತದಾರರ ಸರ್ವೇ ನಡೆಸಿ ಈ ಸಮೀಕ್ಷೆ ನಡೆಸಲಾಗಿದೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು 122 ಸ್ಥಾನಗಳನ್ನು ಗೆಲ್ಲುವುದಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷವು 119 ರಿಂದ 120 ಸೀಟುಗಳನ್ನು ಪಡೆಯಲಿದೆ ಎಂದು ಸಿ’ ಫೋರ್ ಸಮೀಕ್ಷೆಯು ತಿಳಿಸಿತ್ತು.

Also Read  ಮೊದಲ ವರ್ಷದ ಮೊದಲ ಅಪಘಾತ ➤ ಪೊಲೀಸರ ಸಮಯಪ್ರಜ್ಞೆಯಿಂದ ತಪ್ಪಿದ ಅಪಾಯ

error: Content is protected !!
Scroll to Top