(ನ್ಯೂಸ್ ಕಡಬ) newskadaba.com ಡಿ. 16 ಬ್ರಿಸ್ಬೇನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟವೂ ಹಲವು ಬಾರಿ ಮಳೆಯಿಂದ ಅಡಚಣೆಯಾಗಿ ಅರ್ಧಕ್ಕೆ ದಿನದಾಟವನ್ನು ರದ್ದುಗೊಳಿಸಲಾಯಿತು. ಸದ್ಯ ಭಾರತ 51 ರನ್ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನೂ 394 ಬಾರಿಸಬೇಕಿದೆ. ರೋಹಿತ್(0) ಮತ್ತು ರಾಹುಲ್(33) ಕ್ರೀಸ್ನಲ್ಲಿದ್ದಾರೆ.
7 ವಿಕೆಟ್ಗೆ 405 ರನ್ ಗಳಿಸಿದ್ದಲ್ಲಿಂದ ಸೋಮವಾರ ಆಟ ಮುಂದುವರಿಸಿದ ಆಸ್ಟ್ರೇಲಿಯಾ 445 ರನ್ಗೆ ಆಲೌಟ್ ಆಯಿತು. 45 ರನ್ ಬಾರಿಸಿದ್ದ ಅಲೆಕ್ಸ್ ಕ್ಯಾರಿ 70 ರನ್ ಬಾರಿಸಿದರು. ಮಿಚೆಲ್ ಸ್ಟಾರ್ಕ್ 18 ರನ್ ಗಳಿಸಿದರು. ಭಾನುವಾರ 5 ವಿಕೆಟ್ ಕಿತ್ತಿದ್ದ ಜಸ್ಪ್ರೀತ್ ಬುಮ್ರಾ ಸೋಮವಾರ ಒಂದು ವಿಕೆಟ್ ಉರುಳಿಸಿದರು. ಒಟ್ಟು 76 ರನ್ಗೆ 6 ವಿಕೆಟ್ ಕಿತ್ತರು. ಮೊಹಮ್ಮದ್ ಸಿರಾಜ್ 2 ವಿಕೆಟ್ ಕಿತ್ತರು.ಜೈಸ್ವಾಲ್ ಈ ಪಂದ್ಯದಲ್ಲಿಯೂ ಮಿಚೆಲ್ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಸ್ಟಾರ್ಕ್ ಅವರ ಮೊದಲ ಎಸೆತವನ್ನು ಬೌಂಡರಿ ಬಾರಿಸಿದ ಜೈಸ್ವಾಲ್ ಮುಂದಿನ ಎಸೆತದಲ್ಲಿ ಮಿಚೆಲ್ ಮಾರ್ಷ್ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಬಳಿಕ ಬಂದ ಶುಭಮನ್ ಗಿಲ್ ಕೂಡ ಒಂದು ರನ್ಗೆ ಔಟಾದರು. ಸ್ಪಿಪ್ನಲ್ಲಿ ನಿಂತಿದ್ದ ಮಾರ್ಷ್ ಹಕ್ಕಿಯಂತೆ ಹಾರಿ ಅದ್ಭುತ ಕ್ಯಾಚ್ ಹಿಡಿದು ಪೆವಿಲಿಯನ್ಗೆ ಅಟ್ಟಿದರು.