ಕಾರ್ಕಳದಲ್ಲಿ ರಸ್ತೆ ಮೇಲಿನ ಜಲ್ಲಿಕಲ್ಲಿನ ರಾಶಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿ – ಇಬ್ಬರಿಗೆ ಗಾಯ, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಡಿ. 16 ಕಾರ್ಕಳ: ರಾಷ್ಟ್ರೀಯ ಹೆದ್ದಾರಿಯ ಬೇಕಾಬಿಟ್ಟಿ ಕಾಮಗಾರಿಯಿಂದಾಗಿ ರಸ್ತೆಯ ಮೇಲೆ ಹಾಕಿದ್ದ ಜಲ್ಲಿಕಲ್ಲಿನ ರಾಶಿಗೆ ಕಾರು ಡಿಕ್ಕಿ ಹೊಡೆದು, ಪಲ್ಟಿಯಾದ ಪರಿಣಾಮ ಪ್ರಯಾಣಿಕರೊಬ್ಬರು ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ಕಾರ್ಕಳದ ಸಾಣೂರು ಎಂಬಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.

ಮೂಡಬಿದ್ರೆ ಮೂಲದ ತೇಜಸ್ ಹಾಗೂ ಪ್ರಸಾದ್ ಅಪಘಾತದ ಗಾಯಾಳುಗಳು. ಇಬ್ಬರು ಗಾಯಾಳುಗಳ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಬ್ರಹ್ಮಾವರದಲ್ಲಿ ನಡೆದಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಮುಗಿಸಿಕೊಂಡು ವಾಪಸ್ ಬರುವಾಗ ಕಾರ್ಕಳ ಸಮೀಪ ಸಾಣೂರು ಎಂಬಲ್ಲಿ ನಸುಕಿನ ಜಾವ 5.00 ಗಂಟೆಗೆ ಸಂಭವಿಸಿದೆ. ಕಾರು ಚಾಲಕ ರಸ್ತೆಯಲ್ಲಿ ಕೂಡಿ ಹಾಕಲಾಗಿದ್ದ ಜಲ್ಲಿ ರಾಶಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿ ಆದ ಪರಿಣಾಮ ಓರ್ವ ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ಸ್ಥಳೀಯರ ಮಾಹಿತಿಯನ್ವಯ ಘಟನಾ ಸ್ಥಳಕ್ಕೆ 108 ಆಂಬುಲೆನ್ಸ್ ತೆರಳಿದ್ದು, ಪ್ರಥಮ ಚಿಕಿತ್ಸೆ ನೀಡಿ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೂಡಬಿದ್ರಿ ಅಲಂಗಾರಿನ ಮೌಂಟ್ ರೋಟರಿ ಹಾಸ್ಪಿಟಲ್ ಗೆ ದಾಖಲಿಸಲಾಗಿದೆ. 108 ಅಂಬುಲೆನ್ಸ್ ನ ಇ ಎಂ ಟಿ ಮಾಂತೇಶ್ ಪೈಲೆಟ್ ಚಂದ್ರಪ್ಪ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Also Read  ವಿದ್ಯಾರ್ಥಿ ನಾಯಕರನ್ನು ಅನ್ಯಾಯವಾಗಿ ಜೈಲಿನಲ್ಲಿರಿಸಿದ ಹಿನ್ನೆಲೆ ➤ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾದ್ಯಂತ ಪ್ರತಿಭಟನೆ

 

error: Content is protected !!
Scroll to Top