ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ: ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಡಿ. 14 ಕಾನೂನು ನನಗೂ ಒಂದೇ, ಸ್ವಾಮೀಜಿಗೂ ಒಂದೇ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಳಗಾವಿಯಲ್ಲಿ ಕಳೆದ ಮಂಗಳವಾರ 2ಎ ಮೀಸಲಾತಿಗೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಪಂಚಮಸಾಲಿ ಲಿಂಗಾಯತ ಹೋರಾಟದ ವೇಳೆ ನಡೆದ ಲಾಠಿ ಚಾರ್ಜ್ ಸಮರ್ಥಿಸಿದ್ದಾರೆ. ಸಿಂದಗಿ ಶಾಸಕ ಅಶೋಕ ಮನಗೂಳಿ ಪುತ್ರಿ ವಿವಾಹದಲ್ಲಿ ಪಾಲ್ಗೊಂಡು ಇಲ್ಲಿ ತಂಗಿದ್ದ ಅವರು ಶುಕ್ರವಾರ ಮಾತನಾಡಿ, ಸುವರ್ಣ ಸೌಧಕ್ಕೆ ನುಗ್ಗಲು ಮುಂದಾದರು. ಕಲ್ಲು ಹೊಡೆದರು. ನನ್ನ ಬಳಿ ಫೋಟೊಗಳಿವೆ.

ಅವರು ಕಲ್ಲು ಹೊಡೆಯದಿದ್ದರೆ 20 ಜನ ಪೊಲೀಸರಿಗೆ ಹೇಗೆ ಏಟು ಬಿತ್ತು? ಅವರು ಹೇಳಿದ್ದಕ್ಕೆ ಸಾಕ್ಷಿ ಇಲ್ಲ, ನನ್ನಲ್ಲಿ ‘ಎವಿಡೆನ್ಸ್’ ಇದೆ ಎಂದರು. ಪಂಚಮಸಾಲಿ ಹೋರಾಟದ ವಿಚಾರವಾಗಿ ಎರಡು ಬಾರಿ ಸಭೆ ಮಾಡಿದ್ದೇನೆ. ಹಿಂದುಳಿದ ವರ್ಗಗಳ ಜೊತೆ ಹೋಗಿ ಎಂದರೂ ಕೇಳ ಲಿಲ್ಲ. ಶಾಂತಿಯುತ ಚಳವಳಿಗೆ ಸಮ್ಮತಿಸಿದರೂ ಟ್ರ್ಯಾಕ್ಟರ್ ತರಲು ಮುಂದಾದರು. ಅವಕಾಶ ಕೊಡಲಿಲ್ಲ.ಕೋರ್ಟ್ ಕೂಡ ಶಾಂತ ಹೋರಾಟಕ್ಕೆ ಸೂಚಿಸಿದೆ. ಆದರೆ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸ ಮಾಡಿ ಸಚಿವರಾದ ಮಹಾದೇವಪ್ಪ, ಸುಧಾಕರ, ವೆಂಕಟೇಶ ಮಾತುಕತೆಗೆ ಸಿಎಂ ಆಹ್ವಾನಿಸಿದರೆ ಬರಬೇಕು ಎಂದರು.  ಎಲ್ಲಾ ಕಡೆ ಹೋಗಲಾಗುತ್ತಾ ಎಂದರು. ಪಂಚಮಸಾಲಿಗೆ ಬಿಜೆಪಿ ಟೋಪಿ: ಪಂಚಮ ಸಾಲಿ ಹೋರಾಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ. 2ಡಿ ಕೊಟ್ಟು ಬಳಿಕ ಹೈಕೋರ್ಟ್‌ಗೆ 2023 ಮಾರ್ಚ್ 23ರಂದು ಅಫಿಡವಿಟ್ ಹಾಕಿದ್ದಾರೆ.ಹೋರಾಟಕ್ಕೆ ತಕರಾರಿಲ್ಲ. ಆದರೆ ಸಂವಿಧಾನ ಬದ್ಧವಾಗಿರಬೇಕು. ಬಿಜೆಪಿ ಸರ್ಕಾರ ವಿದಾಗ 2023 ಮಾರ್ಚ್ 27ರಂದು 2ಡಿ ಮಾಡಿದ್ದಾರೆ. 3ಬಿನಲ್ಲಿ ಪಂಚಮಸಾಲಿಗಳಿದ್ದಾರೆ. ಹಿಂದುಳಿದ ವರ್ಗದಲ್ಲಿ ಎಷ್ಟು ಜಾತಿ ಗಳಿವೆ ಗೊತ್ತಾ ಎಂದು ಪ್ರಶ್ನಿಸಿದರು. ಬಿಜೆಪಿ ಯವರು ಮುಸ್ಲಿಮರ ಮೀಸಲು ರದ್ದು ಮಾಡಿ 2ಸಿ, 2ಡಿ ಅಂತ ಮಾಡಿ ಅದರಲ್ಲಿ ಶೇ.4 ರಷ್ಟು ತೆಗೆದು ಇವರಿಗೆ ಕೊಟ್ಟಿದ್ದಾರೆ ಎಂದರು.

Also Read  ಉಜಿರೆ: ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುತ್ತಿರುವ ಸಮ್ಮೇಳನದ ಸಂದೇಶ ಎಲ್ಲೆಡೆ ಹರಡಲಿ ➤ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್

error: Content is protected !!
Scroll to Top