ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ , ಏರ್ ಆಂಬ್ಯುಲೆನ್ಸ್ ಗೆ ಪ್ಲಾನ್

(ನ್ಯೂಸ್ ಕಡಬ) newskadaba.com  ಡಿ. 12 ಬೆಂಗಳೂರು: ಬೆಂಗಳೂರಿನ ಟ್ರಾಫಿಕ್‌ ದಟ್ಟಣೆಯಲ್ಲಿ ಬಾಕಿಯಾಗಿ ಮೃತಪಡುವ, ಆರೋಗ್ಯ ಸಮಸ್ಯೆಯ  ರೋಗಿಗಳನ್ನು ಹೆಲ್ತ್‌ ಎಮರ್ಜೆನ್ಸಿ  ಸ್ಥಿತಿಯಲ್ಲಿ ತುರ್ತು ಆಸ್ಪತ್ರೆಗೆ ಸೇರಿಸಲು ರಾಜ್ಯ ಸರ್ಕಾರ ಹೊಸ ಯೋಜನೆ ಮಾಡಿದೆ. ಅದರಂತೆ, ಏರ್‌ ಆಂಬ್ಯುಲೆನ್ಸ್‌ ಬಳಸಲು ಮುಂದಾಗಿದೆ.

ಆರೋಗ್ಯ ಇಲಾಖೆ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಇದೇ ಮೊದಲ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಲಿಪ್ಯಾಡ್ ನಿರ್ಮಾಣಕ್ಕೆ ಮುಂದಾಗಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಲಾಂಚ್ ಆಗಲಿದೆ. ಇಲ್ಲಿಗೆ ಏರ್‌ ಆಂಬ್ಯುಲೆನ್ಸ್‌ ಅಥವಾ ಹೆಲಿಕಾಪ್ಟರ್‌ ಮೂಲಕ ರೋಗಿಯನ್ನು ಶಿಫ್ಟ್‌ ಮಾಡುವುದು ಪ್ಲಾನು.

ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಸಮಸ್ಯೆಯಿಂದಾಗಿಯೇ ಆಂಬ್ಯುಲೆನ್ಸ್​​ನಲ್ಲಿ ಅದೆಷ್ಟೋ ರೋಗಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನೊಂದಡೆ ಅಂಗಾಂಗ ದಾನದ ಸಂದರ್ಭದಲ್ಲಿ ಅಂಗಾಂಗವನ್ನು ಟ್ರಾಫಿಕ್‌ನಲ್ಲಿ ಸಾಗಿಸುವುದು ದೊಡ್ಡ ಸವಾಲಾಗಿದೆ. ಹೀಗಾಗಿ ಸರ್ಕಾರ ತುರ್ತು ಆರೋಗ್ಯ ಸೇವೆ ನೀಡಲು ಹೊಸ ಪ್ಲ್ಯಾನ್ ಮಾಡಿದ್ದು, ಹೆಲ್ತ್ ಎಮರ್ಜೆನ್ಸಿಗೆ ಏರ್ ಆಂಬ್ಯುಲೆನ್ಸ್​​ ಪರಿಚಯಿಸುವ ಬ್ಲ್ಯೂ ಪ್ರಿಂಟ್ ರೆಡಿ ಮಾಡಿದೆ.  ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಸಂದರ್ಭದಲ್ಲಿ ತುರ್ತು ಆಸ್ಪತ್ರೆಗೆ ವರ್ಗಾಯಿಸಲು ಈ ಏರ್ ಆಂಬ್ಯುಲೆನ್ಸ್ ಸಾಕಷ್ಟು ಸಹಾಯಕವಾಗಲಿದೆ. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿ ಒಂದು ಸಾವಿರ ಬೆಡ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಇದರ ಮೇಲೆ ಹೆಲಿಪ್ಯಾಡ್ ಅಳವಡಿಸಿಕೊಳ್ಳಲು ಪ್ಲಾನ್ ಮಾಡಲಾಗುತ್ತಿದೆ.

Also Read  ನೆಲ್ಯಾಡಿ: ಬೃಹತ್ ಆಯಿಲ್ ದಂಧೆ ಭೇದಿಸಿದ ಪೊಲೀಸರು ➤ ನಾಲ್ವರ ಬಂಧನ

error: Content is protected !!
Scroll to Top