(ನ್ಯೂಸ್ ಕಡಬ) newskadaba.com ಡಿ. 12 ಉಡುಪಿ: ಕುಂದಾಪುರ ಬಳಿ ಸೋಮವಾರ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ 59 ವರ್ಷದ ರಾಷ್ಟ್ರೀಯ ಕಾರು ರೇಸಿಂಗ್ ಚಾಂಪಿಯನ್ ಒಬ್ಬರು ಸಾವನ್ನಪ್ಪಿದ್ದಾರೆ.
ಮಂಗಳೂರು ಮೂಲದ ರಂಜಿತ್ ಬಲ್ಲಾಳ್ ಮೃತಪಟ್ಟವರು. ತನ್ನ ಕುಟುಂಬಸ್ಥರೊಂದಿಗೆ ಮೂರು ದಿನಗಳ ಹಿಂದೆ ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ರಂಜಿತ್ ಬೈಕ್ ಗೆ ಗ್ಯಾಸ್ ಸಿಲಿಂಡರ್ ಸಾಗಾಟದ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಸೋಮವಾರ ಸಂಜೆ 4-30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.ರಂಜಿತ್ ಕಾರು ರೇಸಿಂಗ್ ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.