ಕಡಬ – ಪಂಜ ಹೆದ್ದಾರಿಯ ತೇಪೆಯಲ್ಲಿ ಕಳಪೆ ಕಾಮಗಾರಿ ಆರೋಪ

ಕಡಬ, ಡಿ.11. ತೀರಾ ಹದಗೆಟ್ಟಿದ್ದ ಕಡಬ – ಕೋಡಿಂಬಾಳ ರಾಜ್ಯ ಹೆದ್ದಾರಿಯ ತೇಪೆ ಹಚ್ಚುವ ಕಾಮಗಾರಿಯನ್ನು ತಡೆದ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡ ಘಟನೆ ಬುಧವಾರದಂದು ಕಡಬ ತಾಲೂಕಿನ ಕೋಡಿಂಬಾಳ ಕಲ್ಲಂತಡ್ಕ ಎಂಬಲ್ಲಿ ನಡೆದಿದೆ.

ಕಳೆದ ಕೆಲವು ವರ್ಷಗಳಿಂದ ರಸ್ತೆ ಮರು ಡಾಮರೀಕರಣದ ಬಗ್ಗೆ ಕುಂಟು ನೆಪ ಹೇಳುತ್ತಿರುವ ಲೋಕೋಪಯೋಗಿ ಇಲಾಖೆಯು ಕಳೆದ ವರ್ಷ ಪ್ಯಾಚ್‌ವರ್ಕ್ ಕಾಮಗಾರಿ ನಡೆಸಿದ್ದು, ಒಂದು ವರ್ಷದಲ್ಲೇ ಸಂಪೂರ್ಣ ಹದಗೆಟ್ಟು ಹೋಗಿದೆ. ಬುಧವಾರದಂದು ಮತ್ತೆ ತೇಪೆ ಹಚ್ಚುವ ಕಾಮಗಾರಿ ನಡೆಸಲು ಆಗಮಿಸಿದ ಕೆಲಸಗಾರರನ್ನು ಕಳಪೆ ಕಾಮಗಾರಿಯ ಆರೋಪದಲ್ಲಿ ತಡೆ ಹಿಡಿದ ಸ್ಥಳೀಯರು ಲೋಕೋಪಯೋಗಿ ಇಂಜಿನಿಯರ್ ಮತ್ತು ಗುತ್ತಿಗೆದಾರರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಯಿತು. ಕಡಬದಿಂದ ಸುಳ್ಯವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಕಡಬದಿಂದ ಕೋಡಿಂಬಾಳದವರೆಗೆ ಭಾಗಷಃ ಹದಗೆಟ್ಟಿದೆ.

Also Read  ಖಾಸಗಿ‌ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಸ್ವೀಕೃತವಲ್ಲ ➤ ಕ್ಯಾಂಪಸ್ ಫ್ರಂಟ್

error: Content is protected !!
Scroll to Top