(ನ್ಯೂಸ್ ಕಡಬ) newskadaba.com ಡಿ. 11. ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಚಲೋ ಬೆಳಗಾವಿ -ಅಂಬೇಡ್ಕರ್ ಜಾಥಾ ೨ ಇದರ ಪತ್ರಿಕಾಗೋಷ್ಠಿಯು ಹಾವೇರಿ ಜಿಲ್ಲೆಯ ಪತ್ರಿಕಾ ಭವನದಲ್ಲಿ ನಡೆಯಿತು.
ಪತ್ರಿಕಾಗೋಷ್ಠಿಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೀಲಾನಿ ಮೇದೂರ ರವರು ಸ್ವಾಗತಿಸಿದರು. ಹಾವೇರಿ ಜಿಲ್ಲಾ ಅಧ್ಯಕ್ಷರಾದ ಖಾಸೀಮ್ ರಬ್ಬಾನಿ ರವರು ಮಾತಾನಾಡಿ, ಸದರಿ ಜಾಥಾವು ಡಿಸೆಂಬರ್ 10ರಂದು ಉಡುಪಿಯಿಂದ ಪ್ರಾರಂಭವಾಗಿ ವಿವಿಧ ಜಿಲ್ಲೆಗಳಲ್ಲಿ ಸಂಚರಿಸುವ ಮೂಲಕ ಡಿ. 13ರ ಶುಕ್ರವಾರದಂದು ಬೆಳಗ್ಗೆ 11:00 ಗಂಟೆಗೆ ಜಿಲ್ಲೆಯ ರಾಣೆಬೆನ್ನೂರಗೆ ಪ್ರವೇಶಿಸಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ನಗರದಲ್ಲಿರುವ ಎಸ್‌ಡಿಪಿಐ ಪಕ್ಷದ ಕಚೇರಿಯಿಂದ ಜಾಥಾವು ಪ್ರಾರಂಭವಾಗಿ ದರ್ಗಾ ವೃತ್ತ ಮುಖಾಂತರ ಮಿನಿ ವಿಧಾನಸಭಾ ತಲುಪಿ ಅಲ್ಲಿ ಸಮಾವೇಶ ಕಾರ್ಯಕ್ರಮ ನಡೆಯಲಿದೆ. ಈ ಜಾಥಾದಲ್ಲಿ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್ ಭಾಸ್ಕರ್ ಪ್ರಸಾದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಕಾರ್ಯದರ್ಶಿ ರಿಯಾಜ್ ಕಡಂಬು ಮತ್ತು ಇನ್ನು ಅನೇಕ ರಾಜ್ಯ ನಾಯಕರ ಜೊತೆ ಹಾವೇರಿ ಜಿಲ್ಲೆಯ ನಾಯಕರು ಮತ್ತು ಅಹಿಂದ ವರ್ಗದ ನಾಯಕರು ಭಾಗವಹಿಸುವರು. ಜಾಥಾಕ್ಕೆ ಹಾವೇರಿ ಜಿಲ್ಲೆಯ ಎಲ್ಲ ಜನತೆಯಲ್ಲಿ ಹಾಗೂ ವಿವಿಧ ಸಂಘಟನೆಗಳ ಮತ್ತು ನಾಯಕರ ಬೆಂಬಲವನ್ನು ಯಾಚಿಸಿ ಜಾಥಾವನ್ನು ಯಶಸ್ವಿಗೂಳಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಸಮಿತಿ ಸದಸ್ಯರಾದ ಫಯಾಜ್ ದಾವಣಗೆರೆ ಮಾತನಾಡಿ, ಪ್ರಸ್ತುತ ಕಾಂಗ್ರೆಸ್ ಸರಕಾರದ U TURN ಚಾಳಿಯನ್ನು ಬಿಡಬೇಕು ಹಾಗೂ ಜಾಥಾದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು. ನಮ್ಮದು ಅಹಿಂದ ಸರ್ಕಾರ, ನಾವು ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಹಲವು ಜ್ವಲಂತ ಸಮಸ್ಯಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ. ಕೇವಲ ನೆಪ ಮಾತ್ರದ ಮೌಖಿಕ ಹೇಳಿಕೆಗಳನ್ನು ನೀಡಿ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಈ ಅಸಹಾಯಕ U Turn ಚಾಳಿಯನ್ನು ಖಂಡಿಸಿ, ಚಳಿಗಾಲದ ಅಧಿವೇಶನ ನಡೆಯುವ ಸುವರ್ಣಸೌಧ ಬೆಳಗಾವಿಗೆ ಈ ಕೆಳಕಂಡ ಜನಾಗ್ರಹಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ -2 ಅನ್ನು ಹಮ್ಮಿಕೊಂಡಿದ್ದೇವೆ ಎಂದರು.
> ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಕೂಡಲೆ ಜಾರಿಗೊಳಿಸಬೇಕು.
> ಮುಸ್ಲಿಮರ 2B ಮೀಸಲಾತಿಯನ್ನು ಪುನಸ್ಥಾಪಿಸಿ ಶೇಕಡ 8ಕ್ಕೆ ಏರಿಸಬೇಕು.
> ಕಾಂತರಾಜ್ ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಿ ಮತ್ತು ಜಾರಿಗೊಳಿಸಬೇಕು.
> ವಕ್ಫ್ ಆಸ್ತಿಗಳ ರಕ್ಷಣೆ, ಒಕ್ಕೂಟ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಜಾರಿಗೆ ತರಲು ಹೊರಟಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಬಾರದೆನ್ನುವ ನಿರ್ಣಯವನ್ನು ಸದನದಲ್ಲಿ ಕೈಗೊಳ್ಳಬೇಕು.
> ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿರುವ SCP/TSP ಹಣವನ್ನು ಬೇರೆ ಯಾವುದೇ ಯೋಜನೆಗಳಿಗೆ ಬಳಸಬಾರದು.
> 25-26 ಸಾಲಿನ ಬಜೆಟ್ ನಲ್ಲಿ, ಅಲ್ಪಸಂಖ್ಯಾತರ ಕಲ್ಯಾಣ ಕ್ಕೆ 10 ಸಾವಿರ ಕೋಟಿ ಮೀಸಲಿಡಬೇಕು.
> ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವುದು ಮುಂತಾದ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಮತ್ತು ಈ ಸಮುದಾಯಗಳ ಸಂವಿಧಾನಿಕ ಹಕ್ಕು ರಕ್ಷಣೆ ಕಾಯಿದೆ ಮತ್ತು ಯೋಜನೆಗಳಿಗಾಗಿ ಆಗ್ರಹಿಸಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಸದರಿ ಜಾಥವು ಡಿ. 10ರಂದು ಉಡುಪಿಯಿಂದ ಪ್ರಾರಂಭವಾಗಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ , ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡದ ಮುಖಾಂತರ 16ರಂದು ಬೆಳಗಾವಿಗೆ ತಲುಪುವುದು ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿಲಾನಿ ಮೇದೂರ, ಹಾವೇರಿ ಪಟ್ಟಣ ಸಮಿತಿ ಉಸ್ತುವಾರಿಯಾದ ವಾಜಿದ್ ತಿಮ್ಮಿನಕಟ್ಟಿ, ಇಕ್ಬಾಲ್ ಮುದೇನೂರ ಉಪಸ್ಥಿತರಿದ್ದರು. ಹಾವೇರಿ ಜಿಲ್ಲಾ ಮಾಧ್ಯಮ ಉಸ್ತುವಾರಿ ಅಕ್ಬರ್ ಅಲಿ ವಂದನಾರ್ಪಣೆ ಸಲ್ಲಿಸಿದರು.