ಶರಾವತಿ ಜಲವಿದ್ಯುತ್‌ ಯೋಜನೆ– ಸಂಸತ್‌ ನಲ್ಲಿ ಕನ್ನಡದಲ್ಲೇ ಪ್ರಸ್ತಾಪಿಸಿದ ಬಿ.ವೈ.ರಾಘವೇಂದ್ರ

(ನ್ಯೂಸ್ ಕಡಬ) newskadaba.com  ಡಿ. 11. ಶರಾವತಿ ಜಲವಿದ್ಯುತ್‌ ಯೋಜನೆ ಸಂತ್ರಸ್ತರ ವಿಚಾರವನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಲೋಕಸಭೆಯಲ್ಲಿ ಕನ್ನಡದಲ್ಲೇ ಪ್ರಸ್ತಾಪಿಸಿ ಗಮನ ಸೆಳೆದರು.

1958-64 ರ ನಡುವೆ ಶರಾವತಿ ಯೋಜನೆ ಆಗುತ್ತದೆ. 4 ರಿಂದ 5 ಸಾವಿರ ರೈತರ ಕುಟುಂಬಗಳ ಕೃಷಿ ಭೂಮಿ ಈ ಯೋಜನೆಯಿಂದ ಮುಳುಗಡೆಯಾಗುತ್ತದೆ. ಇದುವರೆಗೂ ಸಂತ್ರಸ್ತ ರೈತರಿಗೆ ಕೃಷಿ ಭೂಮಿ ಒದಗಿಸಿಕೊಡುವ ಕೆಲಸವನ್ನು ಹಿಂದಿನ ಸರ್ಕಾರಗಳು ಮಾಡಿಲ್ಲ ಎಂದು ತಿಳಿಸಿದ್ದಾರೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಇದೂವರೆಗೂ ಆಗಿಲ್ಲ. ಅರಣ್ಯವನ್ನು ಡಿ ರಿಸರ್ವ್ ಮಾಡಿ ಪುನರ್ವಸತಿ ಕಲ್ಪಿಸಬೇಕು ಎಂದು ಕೇಂದ್ರ ಪರಿಸರ ಸಚಿವಾಲಯಕ್ಕೆ ಸಂಸದರು ಒತ್ತಾಯ ಮಾಡಿದ್ದಾರೆ.

Also Read  ಕ್ಷುಲ್ಲಕ ಕಾರಣಕ್ಕೆ ಮಗುವಿನ ತಲೆಗೆ ಕಲ್ಲಿನಿಂದ ಚಚ್ಚಿ ಹತ್ಯೆ ಮಾಡಿದ ಪಾಪಿ ತಂದೆ !

 

error: Content is protected !!
Scroll to Top