ಮಂಗಳೂರು: ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ 28,18,065ರೂ. ವಂಚನೆ

(ನ್ಯೂಸ್ ಕಡಬ) newskadaba.com .ಡಿ. 11. ಮಂಗಳೂರು: ಪಾರ್ಟ್ ಟೈಮ್ ಜಾಬ್ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ 28,18,065ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
2024ರ ಜುಲೈ 21ರಂದು ಪಾರ್ಟ್ ಟೈಮ್ ಜಾಬ್ ನ ಬಗ್ಗೆ ದೂರುದಾರರಿಗೆ ಪೋನ್ ನಂಬರ್‌ಗೆ ವಾಟ್ಸಾಪ್ ಮೆಸೇಜ್ ಬಂದಿರುತ್ತದೆ. ಆರೋಪಿಗಳು ದೂರುದಾರರ ವಾಟ್ಸಾಪ್ ಗೆ ಟೆಲಿಗ್ರಾಮ್ ಆಪ್ ನ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ದೂರುದಾರರು ಟೆಲಿಗ್ರಾಮ್ ಆಪ್ ಅನ್ನು ಓಪನ್ ಮಾಡಿದಾಗ ಟೆಲಿಗ್ರಾಮ್ ನಲ್ಲಿ ಪಾರ್ಟ್ ಟೈಮ್ ಜಾಬ್ ಏನೆಂದು ಕೇಳಿದಾಗ ಅವರಿಗೆ ಒಂದು ವಿಡಿಯೋ ಕಳುಹಿಸಿ ಅದನ್ನು ನೋಡಿ ಸ್ಕ್ರೀನ್ ಶಾಟ್ ನ್ನು ಕಳುಹಿಸುವಂತೆ ಹೇಳಿದ್ದಾರೆ.

Also Read  ಆಲಂಕಾರಿನಲ್ಲಿ ರತ್ನಶ್ರೀ ಸಂಸ್ಥೆಯಿಂದ ನೂತನ ಪೆಟ್ರೋಲ್ ಬಂಕ್ ➤ ಎಂಆರ್‌ಪಿಎಲ್‌ನ ರಿಟೈಲ್ ಔಟ್‌ಲೆಟ್‌ಗೆ ಭೂಮಿಪೂಜೆ


ದೂರುದಾರರು ಅವರಿಗೆ ಸ್ಕ್ರೀನ್ ಶಾಟ್ ನ್ನು ಕಳುಹಿಸಿದ ತಕ್ಷಣ ಅವರ ಬ್ಯಾಂಕ್ ನ ಖಾತೆಗೆ 130ರೂ. ಹಾಕಿರುತ್ತಾರೆ. ನಂತರ ದೂರುದಾರರು ಹಾಕಿದ ವಿಡಿಯೋ ತಪ್ಪಾಗಿದೆ ಎಂದು ಹೇಳಿ ಅದನ್ನು ಸರಿ ಮಾಡಲು ಟೆಲಿಗ್ರಾಮ್ ಲಿಂಕ್ ನ್ನು ಕಳುಹಿಸಿದ್ದು, ಆ ಲಿಂಕ್ ಅನ್ನು ದೂರುದಾರರು ಓಪನ್ ಮಾಡಿದಾಗ ಆರೋಪಿಗಳು 1000ರೂ. ಮೊತ್ತವನ್ನು ಹಾಕಲು ಹೇಳಿದ್ದಾರೆ. ಅದರಂತೆ ದೂರುದಾರರು ತಮ್ಮ ಬ್ಯಾಂಕ್ ನ ಖಾತೆಯಿಂದ ಹಂತ ಹಂತವಾಗಿ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗೆ ವರ್ಗಾಯಿಸಿರುತ್ತಾರೆ. ಆರೋಪಿಗಳು ದೂರುದಾರರನ್ನು ಹೆಚ್ಚು ಹಣವನ್ನು ಕೊಡುವುದಾಗಿ ನಂಬಿಸಿ ಮೋಸಮಾಡಿ ಒಟ್ಟು 28,18,065ರೂ. ಯನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿರುತ್ತಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಐಟಿ ಕಾಯಿದೆಯಂತೆ ದೂರು ದಾಖಲಾಗಿರುತ್ತದೆ.

Also Read  ಪುತ್ತೂರು :ಸಾರಿಗೆ ನೌಕರರ ದಿಢೀರ್ ಮುಷ್ಕರ.!

error: Content is protected !!
Scroll to Top