(ನ್ಯೂಸ್ ಕಡಬ) newskadaba.com ಡಿ. 11. ಅರಿಶಿನ ಫಸಲಿನ ನಡುವೆ ಹುಲುಸಾಗಿ ಗಾಂಜಾ ಬೆಳೆದಿದ್ದವನ್ನು ಬಂಧಿಸಿರುವ ಘಟನೆ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಹನೂರು ತಾಲೂಕಿನ ಕೆಂಪನಟ್ಟಿ ಗ್ರಾಮದ ಮಾರ(68) ಎಂದು ಗುರುತಿಸಲಾಗಿದೆ.
ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಕುರಿತು ಖಚಿತ ಮಾಹಿತಿಯನ್ನು ಆಧರಿಸಿ ರಾಮಪುರ ಪೊಲೀಸರು ಕಾರ್ಯಾಚರಣೆ ನಡೆಸಿ ವೃದ್ಧನನ್ನು ಬಂಧಿಸಿದ್ದಾರೆ. ಅರಿಶಿನ ಫಸಲಿನ ಮಧ್ಯದಲ್ಲಿ ಬೆಳೆಯಲಾಗಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ 211 ಕೆಜಿ ತೂಕದ 185 ಗಾಂಜಾ ವಶಕ್ಕೆ ಪಡೆದಿದ್ದಾರೆ.