ಪ್ರಧಾನಿ ಮೋದಿಯನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ

(ನ್ಯೂಸ್ ಕಡಬ) newskadaba.com ಡಿ. 11.  ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಕುಟುಂಬ ಪಿಎಂ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಸ್ಪೆಷಲ್ ಪೋಸ್ಟ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ. ರಾಜ್ ಕಪೂರ್ 100ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಮೋದಿಗೆ ಕಪೂರ್‌ ಕುಟುಂಬ ಆಹ್ವಾನ ನೀಡಿದೆ.

ಇದೇ ಡಿ.14ರಂದು ನಟ, ನಿರ್ಮಾಪಕ ರಾಜ್ ಕಪೂರ್ ಅವರ ಹುಟ್ಟಿದ ದಿನವಾಗಿದ್ದು, 2024ಕ್ಕೆ 100ನೇ ವರ್ಷದ ಬರ್ತ್ಡೇ ಸಂಭ್ರಮ. ರಾಜ್ ಕಪೂರ್ 100ನೇ ವರ್ಷದ ಜನ್ಮ ದಿನದ ಗೌರವಾರ್ಥವಾಗಿ ಅವರ 10 ಸಿನಿಮಾಗಳ ಪ್ರದರ್ಶನ ಮತ್ತು ವಿಶೇಷ ಕಾರ್ಯಕ್ರಮವನ್ನು ಕೂಡ ಕಪೂರ್ ಕುಟುಂಬ ಆಯೋಜಿಸಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಪಿಎಂ ಕಚೇರಿಯಲ್ಲಿ ಕಪೂರ್ ಫ್ಯಾಮಿಲಿ ಮೋದಿರನ್ನು ಭೇಟಿ ಮಾಡಿ ಆಹ್ವಾನ ನೀಡಿದೆ.

Also Read  ಡಿ.28 ರಂದು ಉಪ್ಪಿನಂಗಡಿಯಲ್ಲಿ ನೂತನ ಬ್ರೈಟ್ ಎಲೆಕ್ಟ್ರಾನಿಕ್ಸ್ & ಗಿಫ್ಟ್ ,ಪಿ ಎಸ್ ವಾಚ್ ವರ್ಕ್ಸ್ ಶುಭಾರಂಭ

 

error: Content is protected !!
Scroll to Top