ಮಂಗಳೂರು: ಖಾಸಗಿ ಬಸ್ ಗಳಿಗೆ ಬಾಗಿಲು ಅಳವಡಿಸುವ ನಿಯಮ ಪಾಲಿಸುವಲ್ಲಿ ವಿಫಲ

(ನ್ಯೂಸ್ ಕಡಬ) newskadaba.com .ಡಿ. 11. ಪ್ರಯಾಣಿಕರ ಸುರಕ್ಷತೆಯ ಹಿನ್ನೆಲೆ ಡಿಸೆಂಬರ್ 10ರೊಳಗೆ ಎಲ್ಲಾ ಖಾಸಗಿ ಬಸ್‌ಗಳಿಗೆ ಬಾಗಿಲು ಅಳವಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಮುಲ್ಲೈ ಮುಗಿಲನ್ ಅವರು ಪದೇ ಪದೇ ನಿರ್ದೇಶನ ನೀಡಿದ್ದರೂ, ನಿಯಮ ಪಾಲಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಲೇ ಇವೆ.

ಕಳೆದ ತಿಂಗಳು ಡಿಸಿ ಅಧ್ಯಕ್ಷತೆಯಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿತ್ತು. ಮಂಗಳೂರಿನಿಂದ ಬರುವ ನಗರ ಸಾರಿಗೆ ಬಸ್‌ಗಳನ್ನು ಹೊರತುಪಡಿಸಿ ಎಲ್ಲಾ ಖಾಸಗಿ ಬಸ್‌ಗಳು ನಿಗದಿತ ಗಡುವಿನೊಳಗೆ ಬಾಗಿಲು ಹಾಕಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ಈ ಕುರಿತು ಹಲವು ಬಾರಿ ನಿರ್ದೇಶನ ನೀಡಿದ್ದರೂ ಖಾಸಗಿ ಬಸ್ ನಿರ್ವಾಹಕರು ಪಾಲನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಈಗಲಾದರೂ ಅಧಿಕಾರಿಗಳು ಖಾಸಗಿ ಬಸ್ ಗಳಿಗೆ ಬಾಗಿಲು ಅಳವಡಿಸುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Also Read  ಚೇತರಿಕೆ ಕಾರ್ಯಾಚರಣೆ ವೇಳೆ ಹಾನಿಗೊಳಗಾದ ಹೆಲಿಕಾಪ್ಟರ್ ಪತನ

error: Content is protected !!