(ನ್ಯೂಸ್ ಕಡಬ) newskadaba.com ಡಿ. 11. ಸುಳ್ಯ – ಕಾಸರಗೋಡು ರಸ್ತೆಯ ಕುಂಟಾರು – ಮುರೂರು ಮಧ್ಯೆ ಓಮ್ನಿ ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಅಜ್ಜಾವರ ಕರ್ಲಪ್ಪಾಡಿ ನಿವಾಸಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತರನ್ನು ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ನಿವಾಸಿ ಕಾರು ಚಾಲಕ ಮಹಮ್ಮದ್ ಕುಂಞಿ (65) ಎಂದು ಗುರುತಿಸಲಾಗಿದೆ. ಅವರು ತನ್ನ ಮಗನನ್ನು ಕಾಸರಗೋಡಿಗೆ ಬಿಟ್ಟು ಬರುತ್ತಿದ್ದಾಗ ಕುಂಟಾರು ಕಳೆದು- ಮೂರೂರು ಸಮೀಪ ತಲುಪುತ್ತಿದ್ದಂತೆ ಕುಂಟಾರಿನ ಲಾರಿಯೊಂದು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಓಮ್ನಿ ಕಾರು ನಜ್ಜುಗುಜ್ಜಾಗಿದ್ದು ಚಾಲಕ ಮಹಮ್ಮದ್ ಕುಂಞಿ ಆಸ್ಪತ್ರೆಗೆ ಕರೆತರುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
Also Read ಮತದಾರರಿಗೆ ಬಂಪರ್ ಆಫರ್ ಕೊಟ್ಟ ಜೆಡಿಎಸ್.!! ➤ಪಕ್ಷ ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್ ಉಚಿತ..!