ಉಪರಾಷ್ಟ್ರಪತಿ ವಿರುದ್ಧ ಇಂಡಿಯಾ ಮೈತ್ರಿಕೂಟದಿಂದ ಅವಿಶ್ವಾಸ ನಿರ್ಣಯ;ದೇಶದ ಇತಿಹಾಸದಲ್ಲೇ ಮೊದಲು!

(ನ್ಯೂಸ್ ಕಡಬ) newskadaba.com .ಡಿ. 11. ನವದೆಹಲಿ:  ತಮ್ಮ ಬಗ್ಗೆ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಕೂಟವು ರಾಜ್ಯಸಭೆ ಸ್ಪೀಕರ್‌ ಕೂಡ ಆದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವಿರುದ್ಧ ಮಂಗಳವಾರ ಅವಿಶ್ವಾಸ ನಿರ್ಣಯದ ನೋಟಿಸ್‌ ನೀಡಿವೆ.

ಈ ಹಿಂದೆ 3 ಬಾರಿ ಲೋಕಸಭೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಮೂರೂ ವಿಫಲವಾಗಿದ್ದವು. ಆದರೆ ರಾಜ್ಯಸಭೆ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಇದೇ ಮೊದಲು.ಕಾಂಗ್ರೆಸ್‌ , ತೃಣಮೂಲ ಕಾಂಗ್ರೆಸ್‌, ಆಮ್‌ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಡಿಎಂಕೆ, ಆರ್‌ಜೆಡಿಯ ಒಟ್ಟು 60 ಜನರು ಸಂಸದರ ಸಹಿಯೊಂದಿಗೆ ಅವಿಶ್ವಾಸದ ಪತ್ರವನ್ನು ರಾಜ್ಯಸಭೆ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ. ಅವಿಶ್ವಾಸ ನಿರ್ಣಯ ಮಂಡನೆಗೆ 14 ದಿನ ಮೊದಲೇ ನೋಟಿಸ್‌ ನೀಡಬೇಕು. ಇದಕ್ಕೆ ರಾಜ್ಯಸಭೆ ಉಪಸಭಾಪತಿ ಒಪ್ಪಿಗೆ ಬೇಕು. ಈ ಬಗ್ಗೆ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು ‘ರಾಜ್ಯಸಭೆಯ ಪರಿಷತ್ತಿನ ಕಲಾಪಗಳನ್ನು ಅತ್ಯಂತ ಪಕ್ಷಪಾತದ ರೀತಿಯಲ್ಲಿ ನಡೆಸುತ್ತಿರುವ ರಾಜ್ಯಸಭೆಯ ಸಭಾಪತಿಯೂ ಆದ ಅವರ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸುವುದು ಬಿಟ್ಟು ಇಂಡಿಯಾ ಕೂಟಕ್ಕೆ ಬೇರೆ ಆಯ್ಕೆಗಳಿಲ್ಲ. ಇದು ಅತಿ ನೋವಿನ ನಿರ್ಧಾರ. ಆದರೆ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ’ ಎಂದಿದ್ದಾರೆ.ತೃಣಮೂಲ ಕಾಂಗ್ರೆಸ್‌ ಸಂಸದೆ ಸಾಗರಿಕಾ ಘೋಷ್‌ ಪ್ರತಿಕ್ರಿಯಿಸಿ, ‘ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ. ನಮ್ಮ ಹಕ್ಕುಗಳನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾವು ಅವಿಶ್ವಾಸ ನಿರ್ಣಯವನ್ನು ನೀಡಿದ್ದೇವೆ. ಅವರು ನಮಗೆ ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಅವಕಾಶ ನೀಡುತ್ತಿಲ್ಲ’ ಎಂದು ಆರೋಪಿಸಿದರು.

Also Read  ಅಬಕಾರಿ ನೀತಿ ಹಗರಣ         ಸುಪ್ರೀಂಕೋರ್ಟ್ ಜಾಮೀನು ಮಂಜೂರು

error: Content is protected !!
Scroll to Top