(ನ್ಯೂಸ್ ಕಡಬ) newskadaba.com ಡಿ. 10. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿಟ್ಲ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿ ಟ್ಯೂಷನ್ ಕ್ಲಾಸ್ ನ್ನು ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದು, ಶಾಲಾ ಮಕ್ಕಳಿಂದ ಉದ್ಘಾಟನೆ ಮಾಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೇಪು ವಲಯದ ಮೇಲ್ವಿಚಾರಕರಾದ ಜಗದೀಶ್ ಸರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಯೋಜನೆಯಿಂದ ನಡೆಸಲ್ಪಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಶಿಕ್ಷಕರಾದ ಪೂರ್ಣಿಮಾರವರು ಶಿಕ್ಷಣದ ಕುರಿತು ಖಾವಂದರಿಗೆ ಇರುವ ಚಿಂತನೆಗಳ ಬಗ್ಗೆ ಖುಷಿಪಟ್ಟರು. ಯೋಜನೆಯಿಂದ ಶಾಲೆಗಳಿಗೆ ದೊರೆಯುವ ಅನುದಾನಗಳಿಗೆ ಧನ್ಯವಾದ ತಿಳಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಪು ಒಕ್ಕೂಟದ ಅಧ್ಯಕ್ಷರಾದ ವೆಂಕಪ್ಪರವರು ವಹಿಸಿ ಶುಭ ಹಾರೈಸಿದರು. ಜ್ಞಾನವಿಕಾಸ ಕೇಂದ್ರದ ಸಂಯೋಜಕಿ ಹರಿಣಾಕ್ಷಿ ಹಾಗೂ ಟ್ಯೂಷನ್ ಟೀಚರ್ ಚೈತ್ರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪಾ ನಿರೂಪಿಸಿ, ಕೇಪು ಸೇವಾಪ್ರತಿನಿಧಿ ಜ್ಯೋತಿ ಸ್ವಾಗತಿಸಿ, ಶಾಲಾ ಶಿಕ್ಷಕರಾದ ರಮೇಶ್ ಧನ್ಯವಾದಗೈದರು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ನೂಪುರ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.