ಎಸ್‍ಸಿ / ಎಸ್ಟಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಡಿ. 10. 2024-25ನೇ ಸಾಲಿನ ರಾಜ್ಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಪೋರ್ಟಲ್ (State Scholarship Portal) ನಲ್ಲಿ 1 ರಿಂದ 10ನೇ ತರಗತಿಯವರೆಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನವೀಕರಣ ಆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕಾಗಿಲ್ಲ. ಶಾಲಾ ಮುಖ್ಯೋಪಾಧ್ಯಾಯರು ಶಾಲಾ SATS ಲಾಗಿನ್ click here to redirect to Scholarship Portal- > Registration- > Register student ಅರ್ಜಿ ಸಲ್ಲಿಸಬಹುದು.

ಇಲಾಖೆಯ ವೆಬ್‍ಸೈಟ್ swdservices Karnataka gov in-> ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ > ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ > 2024-25 ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (1 ರಿಂದ 10 ನೇ ತರಗತಿ) ನಲ್ಲಿ ಹೊಸ ಖಾತೆಯನ್ನು ಸೃಜಿಸಬೇಕು.

Also Read  ಮಂಗಳೂರು ಭೀಕರ ವಿಮಾನ ದುರಂತಕ್ಕೆ 13 ವರ್ಷ

(ಇಲ್ಲಿಯವರೆಗೂ ಎಸ್.ಎಸ್.ಪಿ ತಂತ್ರಾಂಶದಲ್ಲಿ ಖಾತೆ ಸೃಜಿಸದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಖಾತೆ ಸೃಜಿಸಬೇಕು). ಕಳೆದ 2-3 ವರ್ಷಗಳಿಂದ ಕಾರಣಾಂತರಗಳಿಂದ ವಿದ್ಯಾರ್ಥಿವೇತನ ಪಾವತಿಯಾಗದಿರುವ ವಿದ್ಯಾರ್ಥಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕು.

9 ಮತ್ತು 10 ನೇ ತರಗತಿಯ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಹತ್ತಿರದ Grama One ಅಥವಾ ಸಮಾಜ ಕಲ್ಯಾಣ ಇಲಾಖಾ ಕಛೇರಿಯಲ್ಲಿ ಕಡ್ಡಾಯವಾಗಿ Bio Metric ಮಾಡಿಸಬೇಕು.

ದಾಖಲೆಗಳು:- ವಿದ್ಯಾರ್ಥಿಗಳ SATS ಸಂಖ್ಯೆ. ವಿದ್ಯಾರ್ಥಿಗಳ RD ನಂಬರ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ, ಪೋಷಕರ ಆಧಾರ್ ಕಾರ್ಡ್ ಪ್ರತಿ, ಪಡಿತರ ಚೀಟಿ ಪ್ರತಿ, ವಿದ್ಯಾರ್ಥಿಯ ಬ್ಯಾಂಕ್ ಖಾತೆಯ ಪ್ರತಿ ( ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿರಬೇಕು ಹಾಗೂ NPCI Mapping ಮಾಡಿರಬೇಕು)

Also Read  ಪರಿಶಿಷ್ಟ ಜಾತಿಯ ಕ್ರೀಡಾಪಟುಗಳಿಗೆ ಜಿಮ್ ಸ್ಥಾಪನೆಗೆ ಸಹಾಯಧನ

ಹೆಚ್ಚಿನ ಮಾಹಿತಿಗೆ ಸಮಾಜ ಕಲ್ಯಾಣ ಇಲಾಖೆ ಕಛೇರಿಯನ್ನು ( ದೂರವಾಣಿ ಸಂಖ್ಯೆ – :-08251-298803, 9480843115) ಸಂಪರ್ಕಿಸಲು ಕೋರಲಾಗಿದೆ.

error: Content is protected !!
Scroll to Top