ಬೈಕ್ ನ ಚಕ್ರಕ್ಕೆ ದುಪ್ಪಟ್ಟಾ ಸಿಲುಕಿ ಬಾಲಕಿ ಮೃತ್ಯು ► ಬೈಕಿನಲ್ಲಿ‌ ಸಂಚರಿಸುವಾಗ ಎಚ್ಚರ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ.25. ಪೋಷಕರ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಚೂಡಿದಾರ್ ನ ದುಪ್ಪಟ್ಟಾ ಬೈಕ್ ನ ಚಕ್ರಕ್ಕೆ ಸಿಲುಕಿದ ಪರಿಣಾಮ ಬಾಲಕಿ ರಸ್ತೆಗೆಸೆಲ್ಪಟ್ಟು ಮೃತಪಟ್ಟ ದಾರುಣ ಘಟನೆ ಭಾನುವಾರದಂದು ಕಾಸರಗೋಡಿನಲ್ಲಿ ನಡೆದಿದೆ.

ಮೃತ ಬಾಲಕಿಯನ್ನು ಕಾಸರಗೋಡಿನ ಬೀರಿಕುಳಂ ಪೆರಿಯಂಗೋನತ್ ನಿವಾಸಿ ಸಜಿ ಹಾಗೂ ಬಿಂದು ದಂಪತಿಯ ಪುತ್ರಿ, ಪರಪ್ಪ ಸರಕಾರಿ ಹಯರ್ ಸೆಕಂಡರಿ ಶಾಲಾ ಏಳನೇ ತರಗತಿ ವಿದ್ಯಾರ್ಥಿನಿ ಮರಿಯ(12) ಎಂದು ಗುರುತಿಸಲಾಗಿದೆ. ಮರಿಯ ಭಾನುವಾರದಂದು ‘ಪಾಮ್ ಸಂಡೆ’ ಅಂಗವಾಗಿ ತಂದೆ-ತಾಯಿ ಜೊತೆ ಬೀರಿಕುಳಂ ಚರ್ಚ್ ಗೆ ತೆರಳುತ್ತಿದ್ದಾಗ ಕಿನಾನೂರು – ಕರಿಂದಲ ಎಂಬಲ್ಲಿ ಬೈಕಿ‌ ಚಕ್ರಕ್ಕೆ ದುಪ್ಪಟ್ಟಾ ಸಿಲುಕಿ ರಸ್ತೆಗೆಸೆಯಲ್ಪಟ್ಟಿದ್ದಾಳೆ. ತಕ್ಷಣವೇ ಕಾಞಂಗಾಡ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ನೀಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಸವಣೂರು  ವಲಯ ಕರ್ನಾಟಕ ಟೈಲರ್ ಅಸೋಸಿಯೇಶನ್ ಸಭೆ

error: Content is protected !!
Scroll to Top