(ನ್ಯೂಸ್ ಕಡಬ) newskadaba.com ಕುಂದಾಪುರ, . 10. ಚಾಲಕನ ನಿದ್ದೆಗಣ್ಣಿನಿಂದ ನಿಯಂತ್ರಣ ತಪ್ಪಿದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹಂಗಳೂರು ಸಮೀಪ ಇರುವ ಸಹನಾ ಕನ್ವೆನ್ಶನ್ ಸೆಂಟರ್ ಸಮೀಪ ರಸ್ತೆ ಬಿಟ್ಟು ಡಿವೈಡರ್ ಏರಿ ಸರ್ವಿಸ್ ರಸ್ತೆಗೆ ಮಗುಚಿ ಕೊಂಡ ಘಟನೆ ಇಂದು ಬೆಳಿಗ್ಗಿನ ಜಾವ ಸುಮಾರು ಎರಡು ಗಂಟೆಗೆ ನಡೆದಿದೆ.
ಘಟನೆಯಲ್ಲಿ ಲಾರಿ ಮಗುಚಿ ಬಿದ್ದಿದ್ದು, ರಸ್ತೆ ಸಂಚಾರ ವಿರಳವಾಗಿದ್ದುದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಕುಂದಾಪುರ ಸಂಚಾರಿ ಪೊಲೀಸರು ಆಗಮಿಸಿ ಮಗುಚಿ ಬಿದ್ದ ಲಾರಿಯನ್ನು ಮೇಲೆತ್ತಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also Read ಕರಾವಳಿಯಲ್ಲಿ 5 ದಿನ ಭಾರೀ ಗಾಳಿ ಮಳೆ ➤ ಮೇ 18 ರಂದು ರೆಡ್ ಅಲೆರ್ಟ್ | ಮೇ 17 & 19 ರಂದು ಆರೆಂಜ್ ಅಲೆರ್ಟ್