ಜ. 19 ರಂದು ನಡೆಯುವ ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡೋತ್ಸವ 2025ದ ಲಾಂಛನ ಬಿಡುಗಡೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, . 09. ಬಿ.ಸಿ.ರೋಡ್ ನ ಗಾಣದಪಡ್ಪುವಿನ ಬಿಲ್ಲವ ಸೇವಾ ಸಂಘದ ಆಶ್ರಯದಲ್ಲಿ ಯುವವಾಹಿನಿ ಹಾಗೂ ಬಿಲ್ಲವ ಮಹಿಳಾ ಸಮಿತಿ ಇವರ ಜಂಟಿ ಆಶ್ರಯದಲ್ಲಿ ಜನವರಿ 19 ರಂದು ನಡೆಯುವ ತಾಲೂಕು ಮಟ್ಟದ ಕೋಟಿ ಚೆನ್ನಯ ಕ್ರೀಡೋತ್ಸವ 2025 ಇದರ ಲಾಂಛನ ಬಿಡುಗಡೆ ಹಾಗೂ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಬಿಸಿರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ಶಿಸ್ತುಬದ್ದವಾದ ಕಾರ್ಯಕ್ರಮ ಮೂಡಿಬರುವ ಮೂಲಕ, ತಾಲೂಕಿನ ಬಿಲ್ಲವರು ಸಂಘಟಿತರಾಗಲು ಕ್ರೀಡೋತ್ಸವ ಕಾರ್ಯಕ್ರಮ ಸಕಾಲಿಕವಾಗಿದೆ. ಪಕ್ಷ ಬೇಧಮರೆತು ಮನೆಯ ಕಾರ್ಯಕ್ರಮ ಎಂಬ ದೃಷ್ಟಿಯಿಂದ ಭಾಗವಹಿಸಿ ಎಂದು ಮನವಿ ಮಾಡಿದರು. ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷರುಗಳಾದ ಹರಿಕೃಷ್ಣ ಬಂಟ್ವಾಳ್, ಚಂದ್ರಶೇಖರ ಪೂಜಾರಿ, ರಾಮಪ್ಪ ಪೂಜಾರಿ ಮಾರ್ನಬೈಲು, ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಎಮ್ ತುಂಬೆ, ಯುವವಾಹಿನಿ ಅಧ್ಯಕ್ಷ ದಿನೇಶ್ ರಾಯಿ, ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ಶೈಲಜಾ ರಾಜೇಶ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Also Read  ಉಕ್ರೇನ್ ನಲ್ಲಿ ಕರ್ನಾಟಕದ ವಿದ್ಯಾರ್ಥಿ ಬಲಿ ➤ ಕ್ಯಾಂಪಸ್ ಫ್ರಂಟ್ ಉಡುಪಿ ವತಿಯಿಂದ ಮೊಂಬತ್ತಿ ಬೆಳಗಿಸಿ ಪ್ರತಿಭಟನೆ

 

error: Content is protected !!
Scroll to Top