ನಿಲ್ಲಿಸಿದ್ದ ಲಾರಿಯ ಟಯರ್ ಕಳವು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 07.ರಸ್ತೆಬದಿ ನಿಲ್ಲಿಸಲಾಗಿದ್ದ ಲಾರಿಯ ಟಯರ್ ಕದ್ದುಕೊಂಡು ಹೋದ ಘಟನೆ ಸುಳ್ಯದ ಪೆರಾಜೆಯಲ್ಲಿ ಶುಕ್ರವಾರ ನಡೆದಿದೆ.

ಈ ಲಾರಿಯಲ್ಲಿ ರಬ್ಬರ್ ಮರಗಳನ್ನು ಸಾಗಾಟ ಮಾಡಲಾಗುತ್ತಿತ್ತು. ನಾಲ್ಕು ದಿನಗಳ ಹಿಂದೆ ಲಾರಿಯನ್ನು ಪೆರಾಜೆಯ ರಸ್ತೆ ಬದಿಯಲ್ಲಿ ನಿಲ್ಲಿಸಿ ಮರ ಸಾಗಾಟಗಾರರು ತಮ್ಮ ಊರಾದ ಕೇರಳಕ್ಕೆ ತೆರಳಿದ್ದರು. ಆದರೆ ಇಂದು ಬಂದು ನೋಡುವಾಗ ಲಾರಿಯ ಒಂದು ಟಯರ್ ಕಳವಾಗಿರುವುದು ಬೆಳಕಿಗೆ ಬಂದಿದೆ.

Also Read  ಕರ್ನಾಟಕದಲ್ಲಿ ಮತ್ತೋರ್ವ ಬಾಣಂತಿ ಸಾವು: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಆರೋಪ!

 

error: Content is protected !!
Scroll to Top