ಗೇಮಿಂಗ್ ಆ್ಯಪ್‌ನಲ್ಲಿ 3 ಕೋಟಿ ಹಣ ಕಳೆದುಕೊಂಡ ಖಾಸಗಿ ಕಂಪನಿಯ ಉದ್ಯೋಗಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 07. ನಗರದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಗೇಮಿಂಗ್ ಆ್ಯಪ್‌ನಲ್ಲಿ ಕೋಟಿ ಕೋಟಿ ಹಣ ಕಳೆದುಕೊಂಡು, ಆ್ಯಪ್‌ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ನಿಶಾಂತ್ ಶ್ರೀವತ್ಸ ಎಂಬವರು ಆನ್‍ಲೈನ್ ಗೇಮಿಂಗ್ ಆ್ಯಪ್‌ನಲ್ಲಿ 3 ಕೋಟಿ ರೂ. ಹಣ ಕಳೆದುಕೊಂಡಿದ್ದು, ಸೆಂಟ್ರಲ್ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪಾಕೇಟ್ 52 ಆ್ಯಪ್‌ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆನ್‍ಲೈನ್ ಜೂಜಿನ ಆ್ಯಪ್‌ ಆಗಿರುವ ಪಾಕೇಟ್ 52, ಸಣ್ಣ ಪುಟ್ಟ ಬೆಟ್ಟಿಂಗ್ ಹಾಕಿದಾಗ ಗೆಲ್ಲಲು ಅನುವು ಮಾಡಿಕೊಡುತ್ತದೆ. ದೊಡ್ಡ ಮೊತ್ತದ ಬೆಟ್ಟಿಂಗ್ ಹಾಕಿದ ವೇಳೆ ಸೋಲಿಸುತ್ತದೆ. ಅಲ್ಲದೇ ನಾವು ಆಟವಾಡಿದ ಟೇಬಲ್‍ನ ಮಾಹಿತಿಯನ್ನೂ ನೀಡುವುದಿಲ್ಲ. ಈ ಆ್ಯಪ್‌ನಲ್ಲಿ ಸಾಕಷ್ಟು ಲೋಪಗಳಿದ್ದು, ಯಾವುದೇ ರೀತಿಯ ಭದ್ರತೆ ಇರುವುದಿಲ್ಲ ಎಂಬ ಆರೋಪ ಮಾಡಲಾಗಿದೆ.

Also Read  ತನ್ನನ್ನು "ರಾಗಿಣಿ" ಇರುವ ಸೆಲ್ ಗೆ ವರ್ಗಾಹಿಸುವಂತೆ "ಆಡಂ ಪಾಷಾ" ಕಿರಿಕ್

 

 

error: Content is protected !!
Scroll to Top