ಬೈಕ್ ಅಪಘಾತದಲ್ಲಿ ಗಾಯಗೊಡಿದ್ದ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಡಿ. 07. ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಡಬಿದ್ರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಪಡುಮಾರ್ನಾಡು ಗ್ರಾಮದ ಬನ್ನಡ್ಕ  ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಚಿನ್ನದ ಕೆಲಸಗಾರ, ತೋಡಾರು ಗ್ರಾಮದ ಸೀತಾರಾಮ ಆಚಾರ್ಯ (46) ಎಂದು ಗುರುತಿಸಲಾಗಿದೆ. ಮೂಡುಬಿದಿರೆ ಜ್ಯೋತಿನಗರದಲ್ಲಿ ಚಿನ್ನದ ವೃತ್ತಿಗೆ ಸಂಬಂಧಿಸಿದ ವಿಘ್ನೇಶ್ ಮೆಷಿನ್ ಕಟ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದು ಜನವರಿ ೩ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಕಾಗದವನ್ನು ವಿತರಿಸಿ ವಾಪಸ್ಸು ಬರುತ್ತಿದ್ದ ವೇಳೆ ಬನ್ನಡ್ಕ ಬಳಿ ಬೈಕ್‌ನಿಂದ ಬಿದ್ದಿದ್ದರು. ಸ್ಥಳೀಯರು ಕೂಡಲೇ ಅಲಂಗಾರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತರ ಸಹೋದರ ನೀಡಿದ ದೂರಿನಂತೆ ಪೊಲಿಸರು ಸಂಶಯಾಸ್ಪದ ಮೃತ್ಯು ಪ್ರಕರಣ ದಾಖಲಿಸಿದ್ದಾರೆ.

Also Read  ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ➤7 `IAS' ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ

 

error: Content is protected !!
Scroll to Top