ಬೆಂಗಳೂರಿನಲ್ಲಿ ಮುಂದಿನ ವರ್ಷದಿಂದ ನೀರಿನ ದರ ಹೆಚ್ಚಳ ಸಾಧ್ಯತೆ

(ನ್ಯೂಸ್ ಕಡಬ) newskadaba.com ಡಿ. 05 ಬೆಂಗಳೂರು:  ಬೆಂಗಳೂರಿಗರಿಗೆ ಮುಂದಿನ ವರ್ಷದ ಆರಂಭದಿಂದ ನೀರಿನ ದರ ಹೆಚ್ಚಳವಾಗುವ ಸಾಧ್ಯತೆಯಿದೆ. BWSSB ನೀರಿನ ದರ ಪರಿಷ್ಕರಣೆಗೆ ಮುಂದಾಗಿದ್ದು, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ನೀರಿನ ದರ ಪರಿಷ್ಕರಣೆಗೆ ಬೆಂಬಲ ನೀಡುವಂತೆ BWSSB ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ನಗರದ ಎಲ್ಲಾ 27 ಶಾಸಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮಂಡಳಿಯು ಎದುರಿಸುತ್ತಿರುವ ತೀವ್ರ ಆರ್ಥಿಕ ಒತ್ತಡವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ನೀರಿನ ದರವನ್ನು ಕೊನೆಯ ಬಾರಿಗೆ ನವೆಂಬರ್ 2014 ರಲ್ಲಿ ಪರಿಷ್ಕರಿಸಲಾಗಿತ್ತು. ಕಳೆದೊಂದು ದಶಕದಲ್ಲಿ ಜಲಮಂಡಳಿ ವಿದ್ಯುತ್ ಸೇರಿದಂತೆ ಇತರ ಅಗತ್ಯ ಸೇವೆಗಳು ಮತ್ತು ಸೌಕರ್ಯಗಳಿಗಾಗಿ ಮಾಡಿದ ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವೆಚ್ಚ ಶೇ.107.3ರಷ್ಟು ಮತ್ತು ನಿರ್ವಹಣಾ ವೆಚ್ಚದಲ್ಲಿ ಶೇ.122.5ರಷ್ಟು ಹೆಚ್ಚಳವಾಗಿದ್ದು, ವೇತನ ಮತ್ತು ಪಿಂಚಣಿಯಲ್ಲಿ ಶೇ.61.3ರಷ್ಟು ಹೆಚ್ಚಳವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Also Read   ಅನುಮಾನದ ಭೂತ…!!!! ➤  ಬೇಸತ್ತ ಹೆಂಡತಿ, ಮಗಳು  ಆತ್ಮಹತ್ಯೆಗೆ ಶರಣು

ಅಲ್ಲದೆ, ಮಂಡಳಿಯ ಮಾಸಿಕ ವೆಚ್ಚ ರೂ. 170 ಕೋಟಿ ಆಗಿದ್ದು, ನೀರಿನ ಬಿಲ್‌ಗಳಿಂದ ಕೇವಲ 129 ಕೋಟಿ ರೂಪಾಯಿ ಆದಾಯ ಬರುತ್ತಿದ್ದು, 41 ಕೋಟಿ ರೂಪಾಯಿ ಕೊರತೆಯಾಗಿದೆ.

error: Content is protected !!
Scroll to Top