ಬೆಂಗಳೂರು: ಆನ್ಲೈನ್ ಜೂಜಾಟದ ಹುಚ್ಚು- ಸಾಲ ತೀರಿಸಲು ಸಾಧ್ಯವಾಗದೆ ವಿದ್ಯಾರ್ಥಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com ಡಿ. 05 ಬೆಂಗಳೂರು: ಆನ್‌ಲೈನ್ ಜೂಜಾಟಕ್ಕೆ ವ್ಯಸನಿಯಾಗಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆ.ಆರ್.ಪುರಂ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ 2ನೇ ವರ್ಷದ ವಿದ್ಯಾರ್ಥಿಯಾಗಿದ್ದ ಪ್ರವೀಣ್ (20) ಆತ್ಮಹತ್ಯೆ ಮಾಡಿಕೊಂಡ ಯುವಕ. ನವೆಂಬರ್ 23 ರಂದು ಕೆಆರ್ ಪುರಂನಲ್ಲಿರುವ ಪ್ರವೀಣ್ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಹಣವನ್ನು ಹಿಂದಿರುಗಿಸುವಂತೆ ಸ್ನೇಹಿತರು ಒತ್ತಡ ಹೇರಿದ್ದಹಿನ್ನೆಲೆಯಲ್ಲಿ ಪ್ರವೀಣ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ಡಿಸೆಂಬರ್ 2 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರವೀಣ್ ಒಂದು ವರ್ಷದಿಂದ ಆನ್‌ಲೈನ್ ಜೂಜಾಟದ ಚಟ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಕ್ರಿಕೆಟ್ ಮತ್ತು ಇತರ ಕ್ರೀಡೆಗಳ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದ ಎಂದು ವರದಿಯಾಗಿದೆ. ಜೂಜಾಟದ ಚಟಕ್ಕೆ ಹಣ ಹೊಂದಿಸಲು ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಲ ಪಡೆದಿದ್ದ. ಸಾಲ ಹೆಚ್ಚಾದಾಗ ಹಣವನ್ನು ಮರುಪಾವತಿಸುವಂತೆ ಸ್ನೇಹಿತರ ಒತ್ತಡ ಹೇರುತ್ತಿದ್ದರು. ಸಾಲ ತೀರಿಸಲು ಸಾಧ್ಯವಾಗದ ಕಾರಣ ಪ್ರವೀಣ್ ನವೆಂಬರ್ 23 ರಂದು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾನೆ. ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದ. ಪ್ರವೀಣ್ ಪೋಷಕರು ನೇಣು ಬಿಗಿದುಕೊಂಡಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Also Read  ಚೈತ್ರಾಗೆ ರಕ್ಷಣೆ ನೀಡಿರುವುದು ಸುಳ್ಳು ಸುದ್ದಿ- ಸುರಯ್ಯ ಅಂಜುಂ ಸ್ಪಷ್ಟನೆ

error: Content is protected !!
Scroll to Top