(ನ್ಯೂಸ್ ಕಡಬ) newskadaba.com ಡಿ. 04 ಕಾಸರಗೋಡು: ಫೆಂಗಲ್ ಚಂಡಮಾರುತದ ಪ್ರಭಾವದಿಂದ ಸುರಿದ ಭಾರೀ ಕಾಸರಗೋಡು ಅಡ್ಕತಬೈಲ್ ನಲ್ಲಿ ಮನೆಯೊಂದರ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.
ಅಡ್ಕತಬೈಲ್ ನಿವಾಸಿ ಕಿಶೋರ್ ಕುಮಾರ್ ಎಂಬವರ ಹೆಂಚಿನ ಮನೆಯ ಛಾವಣಿ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಏಕಾಏಕಿ ಕುಸಿದಿದೆ. ಈ ವೇಳೆ ಮನೆಯೊಳಗಿದ್ದ ಕಿಶೋರ್ ಕುಮಾರ್ ಮತ್ತು ಅವರ ಪತ್ನಿ ಶಶಿಕಲಾ ಹೊರಗಡೆ ಓಡಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಛಾವಣಿ ಕುಸಿತದಿಂದ ಮನೆ ಹಾನಿಯಾಗಿದ್ದು, ಭಾರೀ ನಷ್ಟ ಉಂಟಾಗಿದೆ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಹಲವೆಡೆ ಅಪಾರ ನಾಶ ನಷ್ಟ ಸಂಭವಿಸಿರುವುದು ವರದಿಯಾಗಿದೆ.