ರಸ್ತೆ ಅಪಘಾತ: ಸವಾರನಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಡಿ. 04. ಟಿಪ್ಪರ್ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಕಾಲು ಕಳೆದುಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ಇಂದು ಬೆಳಗ್ಗೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಆರ್.ಟಿ.ಒ. ಸರ್ಕಲ್ ನಲ್ಲಿ ಈ ಅಪಘಾತ ಸಂಭವಿಸಿದೆ. ಕೇರಳದ ಮಲ್ಲಪುರಂ ನಿವಾಸಿ ಜಾಸ್ಮೀನ್ (35) ಕಾಲು ಕಳೆದುಕೊಂಡಿರುವ ಯುವಕ. ಟಿಪ್ಪರ್ ಬೈಕ್ ಗೆ ಗುದ್ದಿ 20 ಮೀಟರ್ ದೂರು ಎಳೆದೊಯ್ದಿದೆ. ಇದರಿಂದ ಬೈಕ್ ಸವಾರ ಜಾಸ್ಮೀನ್ ಗೆ ಕಾಲು ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಗುಂಡ್ಲುಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

Also Read  ಈ 8 ರಾಶಿಯವರಿಗೆ ಮದುವೆ ಯೋಗ, ವ್ಯಾಪಾರ ಅಭಿವೃದ್ಧಿ, ಅಂದುಕೊಂಡ ಕಾರ್ಯ ನಿವಾರಣೆಯಾಗುತ್ತದೆ ಕಷ್ಟಗಳು ಪರಿಹಾರವಾಗುತ್ತದೆ

 

error: Content is protected !!
Scroll to Top