(ನ್ಯೂಸ್ ಕಡಬ) newskadaba.com ಡಿ. 04. ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ವಿಶ್ಟ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಾದಿ ಈಗ ಕಡು ಕಠಿಣವಾಗಿದೆ. ಇದಕ್ಕೆ ಕಾರಣ ದಂಡ ಶಿಕ್ಷೆಗೆ ಒಳಗಾಗಿ ಡಬ್ಲ್ಯುಟಿಸಿಯಲ್ಲಿ 3 ಅಂಕ ಕಳೆದುಕೊಂಡಿರುವುದು. ಕಿವೀಸ್‌ನ ಈ ಮೂರು ಅಂಕದ ಕಡಿತದಿಂದ ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡದ ಫೈನಲ್ ರೇಸ್‌ನ ಹಾದಿ ಮತ್ತಷ್ಟು ಸುಗಮಗೊಂಡಿದೆ. ಅತ್ತ ನ್ಯೂಜಿಲ್ಯಾಂಡ್ ಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.
ಕ್ರೈಸ್ಟ್‌ಚರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ನಿಗದಿಯ ಅವಧಿಯಲ್ಲಿ ಓವರ್‌ಗಳನ್ನು ಪೂರೈಸದ ಕಾರಣಕ್ಕೆ ಐಸಿಸಿ ನ್ಯೂಜಿಲ್ಯಾಂಡ್ ತಂಡದ ಅಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ ಕುಸಿತ ಕಂಡಿದೆ. ನ್ಯೂಜಿಲ್ಯಾಂಡ್ ಮಾತ್ರವಲ್ಲದೆ ಇಂಗ್ಲೆಂಡ್ ತಂಡಕ್ಕೂ ಮೂರು ಅಂಕ ಕಡಿತಗೊಳಿಸಲಾಗಿದೆ.