ಸಂಸತ್ತಿನ ಚಳಿಗಾಲದ ಅಧಿವೇಶನ : ಸಿಗರೆಟ್, ತಂಪುಪಾನೀಯದ ಮೇಲಿನ ಜಿಎಸ್ಟಿ ಶೇ.35ಕ್ಕೆ ಹೆಚ್ಚಳ ಸಂಭವ

(ನ್ಯೂಸ್ ಕಡಬ) newskadaba.com ಡಿ. 03 ನವದೆಹಲಿ: ಅದಾನಿ ಹಗರಣ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ಬಿಕ್ಕಟ್ಟಿಗೆ ಒಳಗಾಗಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನದ ಕಲಾಪಗಳು ಮಂಗಳವಾರದಿಂದ ಸುಗಮವಾಗಿ ಆರಂಭವಾಗುವ ನಿರೀಕ್ಷೆ ಇದೆ. ಸಭಾಧ್ಯಕ್ಷರೊಂದಿಗಿನ ಸರ್ವಪಕ್ಷ ಸಭೆಯ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ.

‘ಡಿ.13 ಮತ್ತು 14ರಂದು ಲೋಕಸಭೆಯಲ್ಲಿ ಮತ್ತು 16 ಮತ್ತು 17ರಂದು ರಾಜ್ಯಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಗೆ ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷಗಳು ಒಪ್ಪಿಕೊಂಡಿವೆ. ಸಂವಿಧಾನ ಸ್ವೀಕರಿಸಿ 75 ವರ್ಷ ಆದ ನಿಮಿತ್ತ ಈ ಚರ್ಚೆಗೆ ಸಮ್ಮತಿ ಸೂಚಿಸಲಾಗಿದೆ. ಇದೇ ವೇಳೆ, ಮಂಗಳವಾರದಿಂದ ಸಾಮಾನ್ಯ ಕಲಾಪಗಳು ಕೂಡ ಸುಗಮವಾಗಿ ಆರಂಭವಾಗುವ ನಿರೀಕ್ಷೆ ಇದೆ’ ಎಂದು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

Also Read  ಡೆಂಗ್ಯೂ ಶಂಕಿತ ಪ್ರದೇಶದಲ್ಲಿ ಆರೋಗ್ಯತಪಾಸಣಾ ಶಿಬಿರ ಮುಂದುವರಿಕೆ

error: Content is protected !!
Scroll to Top