ಕಾಸರಗೋಡು: ಭಾರೀ ಮಳೆ ಮುನ್ಸೂಚನೆ- ನಾಳೆ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 02. ಭಾರೀ  ಮಳೆ ಮುನ್ಸೂಚನೆ ಹಾಗೂ ಕೇಂದ್ರ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಹಿನ್ನಲೆಯಲ್ಲಿ ನಾಳೆ (3) ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆ ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಆದೇಶ ನೀಡಿದ್ದಾರೆ.

ಪ್ರೊಪೇಶನಲ್ ಕಾಲೇಜು, ಟ್ಯೂಶನ್ ಕೇಂದ್ರ, ಅಂಗನವಾಡಿ, ಮದ್ರಸಗಳಿಗೆ ರಜೆ ಅನ್ವಯ ವಾಗಲಿದೆ. ಆದರೆ ಮೋಡಲ್ ರೆಶಿಡೆನ್ಶಿಯಲ್ ಶಾಲೆಗಳಿಗೆ ರಜೆ ಅನ್ವಹಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಭಾರೀ ಮಳೆ ಸುರಿಯುತ್ತಿದೆ. ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

Also Read  ನಂಬಿಗರ ಅಂಬಿಗ -ನಾಟಕ ಪ್ರದರ್ಶನ

 

error: Content is protected !!
Scroll to Top